ಸೋಮವಾರ, ಡಿಸೆಂಬರ್ 9, 2019
20 °C

ಕನ್ನಡ ಓದಲು ತಡವರಿಸಿದ ನಾರಾಯಣ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌ ಪೇಟೆ (ಮಂಡ್ಯ): ನಾಮಪತ್ರ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಎದುರು ಪ್ರಮಾಣ ಪತ್ರ ಹಾಗೂ ದೃಢೀಕರಣ ಪತ್ರವನ್ನು ಓದುವಾಗ, ಕೆ.ಸಿ.ನಾರಾಯಣಗೌಡ ತಡವರಿಸಿದರು.

ಸಚಿವ ಮಾಧುಸ್ವಾಮಿ, ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಬಂದಿದ್ದ ನಾರಾಯಣಗೌಡ, ಚುನಾವಣಾಧಿಕಾರಿಯ ಎದುರು ಪ್ರಮಾಣ ಪತ್ರ ಓದಲಾರಂಭಿಸಿದರು. ಈ ವೇಳೆ ಅವರು ತಡವರಿಸಲಾರಂಭಿಸಿದರು. 

ಈ ಸಂದರ್ಭದಲ್ಲಿ ಅವರ ಪತ್ನಿ ದೇವಕಿ ಓದಲು ಸಹಾಯ ಮಾಡಿದರು. ನಾರಾಯಣಗೌಡ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ, ಪ್ರಮಾಣವಚನ ಸ್ವೀಕರಿಸುವಾಗಲೂ ಕನ್ನಡ ಓದಲು ತಡವರಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು