ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ

ಮೇ 1ರಂದು ಕವಿ– ಕಾವ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರದಾನ
Last Updated 23 ಏಪ್ರಿಲ್ 2019, 17:20 IST
ಅಕ್ಷರ ಗಾತ್ರ

ಪಾಂಡವಪುರ: ಯುವ ಬರಹಗಾರರ ಬಳಗದ ತಾಲ್ಲೂಕು ಘಟಕದ ವತಿಯಿಂದ ನೀಡುವ ರಾಜ್ಯಮಟ್ಟದ ‘ಕನ್ನಡ ಸೇವಾರತ್ನ ಪ್ರಶಸ್ತಿ’ಗೆ ಆರು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಕ್ಯಾತನಹಳ್ಳಿಯ ವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಡಾ.ಕೆ.ವೈ.ಶ್ರೀನಿವಾಸ್, ಬೆಂಗಳೂರಿನ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಪುಟ್ಟರಾಜು, ಬೀದರಿನ ಸಾಂಸ್ಕೃತಿಕ ಸಂಘಟಕ ಸಂಜೀವಕುಮಾರ್‌ ಅತಿವಾಳೆ, ಮದ್ದೂರು ತಾಲ್ಲೂಕಿನ ಚಂದೂಪುರದ ಡಿ.ಕೆ.ಗೌಡ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಚ್.ಪುಟ್ಟಸ್ವಾಮಿ, ರಂಗಭೂಮಿ ಕಲಾವಿದ, ಪಾಂಡವಪುರದ ಬೇವಿನಕುಪ್ಪೆ ನಾಗಲಿಂಗೇಗೌಡ, ನಾಗಮಂಗಲದ ಹಾರ್ಟ್‌ ಟ್ರಸ್ಟ್‌ನ ನಿರ್ದೇಶಕ ಡಿ.ಎನ್.ವಸಂತಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಬಳಗದ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.

ಪಟ್ಟಣದ ವಿಜಯ ಕಾಲೇಜಿನ ಬಿಇಡಿ ಸಭಾಂಗಣದಲ್ಲಿ ಕವಿ ಪುತಿನ ಸಂಸ್ಮರಣೆ ಅಂಗವಾಗಿ ಮೇ 1ರಂದು ನಡೆಯುವ ಕವಿ–ಕಾವ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT