ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ನಡುಗಡ್ಡೆಯಲ್ಲಿ ಸಿಲುಕಿದ್ದ ಗಜಾನನ ಸ್ವಾಮೀಜಿ ರಕ್ಷಣೆ

Published 3 ಆಗಸ್ಟ್ 2024, 6:32 IST
Last Updated 3 ಆಗಸ್ಟ್ 2024, 6:32 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಬಳಿ ಕಾವೇರಿ ನದಿಯ ನಡುಗಡ್ಡೆ ಗೌತಮ ಕ್ಷೇತ್ರದಲ್ಲಿ ಕಳೆದ 12 ದಿನಗಳಿಂದ ಇದ್ದ ಗಜಾನನ ಸ್ವಾಮೀಜಿ ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಿ ಶುಕ್ರವಾರ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಯಿತು.

ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತು ಸೇವೆ ಇಲಾಖೆ ಹಾಗೂ ಎಂಇಜಿ ತಂಡದ ಸದಸ್ಯರು ಫೈಬರ್ ದೋಣಿಗಳ ಸಹಾಯದಿಂದ ಸ್ವಾಮೀಜಿ ಮತ್ತು ಮಹಿಳೆಯರನ್ನು ಕರೆ ತಂದರು. ಸ್ವಾಮೀಜಿ ಮತ್ತು ಮಹಿಳೆಯರನ್ನು ಕರೆತರಲು ಗುರುವಾರ ನಡುಗಡ್ಡೆಗೆ ತೆರಳಿ ತಾಂತ್ರಿಕ ಕಾರಣಗಳಿಂದ ಅಲ್ಲೇ ಸಿಲುಕಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಪಾಂಡವಪುರ ಅಗ್ನಿಶಾಮಕ ಠಾಣೆಯ ಮುಖ್ಯ ಅಗ್ನಿಶಾಮಕ ಹರೀಶ್‌ ಮತ್ತು ಅಗ್ನಿಶಾಮಕ ರಿಜ್ವಾನ್‌ ಅವರು ಕೂಡ ಶುಕ್ರವಾರ ಈಚೆಗೆ ಬಂದರು.

ಮೈಸೂರು ವಿಭಾಗದ ಅಗ್ನಿಶಾಮಕ ಪಿ ಎಸ್‌ ಜಯರಾಂ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಕೆ.ಪಿ. ಗುರುರಾಜ್‌, ಸಿ. ರಮೇಶ್‌ ನೇತೃತ್ವದ 25 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

‘ಕಾವೇರಿ ನದಿಯ ನಡುಗಡ್ಡೆಯಲ್ಲಿ ಹಲವು ದಿನಗಳಿಂದ ಇದ್ದ ಗಜಾನನ ಸ್ವಾಮೀಜಿ ಇತರರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ನದಿಯ ಪ್ರವಾಹ ಸಂಪೂರ್ಣ ಇಳಿಯುವವರೆಗೆ ಅವರು ಕ್ಯಾತನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ’ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ತಿಳಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೇಣು, ದರಸಗುಪ್ಪೆ ಪಿಡಿಒ ಕೃಷ್ಣಪ್ಪಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT