ಮಂಡ್ಯ: ನಗರದ ಕೆರೆ ಅಂಗಳದಲ್ಲಿರುವ ಕೆ.ಎಚ್.ಬಿ ಬಡಾವಣೆಯನ್ನು ಮತ್ತೆ ಕರ್ನಾಟಕ ಗೃಹ ಮಂಡಳಿಗೆ ವಾಪಸ್ ನೀಡಲು ನಗರಸಭೆ ಸಾಮಾನ್ಯಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ, ಕೆಎಚ್ಬಿ ಬಡಾವಣೆಗೆ ಮೂಲಸೌಕರ್ಯಗಳನ್ನು ಒದಗಿಸುವ ವಿಚಾರ ಚರ್ಚೆಗೆ ಬಂದ ವೇಳೆ ಸದಸ್ಯ ಎಚ್.ಎಸ್.ಮಂಜು ಅವರು ‘2001ರಲ್ಲಿ ಬಡಾವಣೆ ರಚನೆಗೊಂಡು 18 ವರ್ಷಗಳ ನಂತರ ನಗರಸಭೆಗೆ ಹಸ್ತಾಂತರ ಮಾಡಿದ್ದೀರಿ. ಅದೂ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವ ಸಮಯದಲ್ಲಿ ಆಡಳಿತಾಧಿಕಾರಿ ಮುಖಾಂತರ ಬಡಾವಣೆಯನ್ನು ಹಸ್ತಾಂತರಿಸಿದ್ದೀರಿ. ಇದು ನಿಯಮಬಾಹಿರ’ ಎಂದು ಸಭೆಯ ಗಮನಕ್ಕೆ ತಂದರು.

ಕೆ.ಎಚ್.ಬಿ ಬಡಾವಣೆಯಲ್ಲಿರುವ ಮೂಲೆ ನಿವೇಶನಗಳು, ಸಿಎ ಜಾಗ ಸೇರಿದಂತೆ ಇತರೆ ಆಸ್ತಿ ಇನ್ನೂ ಕೆಎಚ್ಬಿಯಲ್ಲೇ ಉಳಿದುಕೊಂಡಿವೆ. ನಗರಸಭೆ ಹಸ್ತಾಂತರದ ಬಳಿಕವೂ ಮೂಲೆ ನಿವೇಶನಗಳನ್ನು ಮಾರಿ ಬಂದ ಹಣ ನೀವೇ ಇಟ್ಟುಕೊಂಡರೆ ಮೂಲಸೌಲಭ್ಯ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದಾಗ, ಗೃಹಮಂಡಳಿ ಸಹಾಯಕ ಇಂಜಿನಿಯರ್ ಲಾರೆನ್ಸ್ ಪ್ರತಿಕ್ರಿಯಿಸಿ, ಬಡಾವಣೆ ಹಸ್ತಾಂತರ ಸಮಯದಲ್ಲಿ ₹5.50 ಕೋಟಿ ಹಾಗೂ ಒಳಚರಂಡಿ ನಿರ್ಮಾಣಕ್ಕೆ ₹89 ಲಕ್ಷ ನೀಡಲಾಗಿತ್ತು ಎಂದರು. ಆಗ ಅಧ್ಯಕ್ಷ ನಾಗೇಶ್ ಮಧ್ಯಪ್ರವೇಶಿಸಿ ‘ನೀವು ಕೊಟ್ಟಿರುವ ಹಣ ಇವತ್ತಿನ ಎಸ್.ಆರ್ ದರದಲ್ಲಿ ನಾಲ್ಕು ರಸ್ತೆಯನ್ನು ಮಾಡಲಾಗುವುದಿಲ್ಲ’ ಎಂದು ತಿಳಿಸಿದರು.

‘ಗೃಹಮಂಡಳಿ ವತಿಯಿಂದ ಮಾಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಪ್ರಾಧಿಕಾರದ ನಿಯಮದಲ್ಲಿರುವಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕಿತ್ತು. ಕಾನೂನುಬದ್ಧವಾಗಿ ಬಡಾವಣೆ ಹಸ್ತಾಂತರವಾಗದಿರುವುದರಿಂದ ಅದನ್ನು ನಿಮಗೇ ವಾಪಸ್ ನೀಡುತ್ತಿದ್ದೇವೆ’ ಎಂದು ಅಧ್ಯಕ್ಷರು ಹೇಳಿದರು.

‘ಇವತ್ತಿನ ದರದ ಪ್ರಕಾರ ಕೆಎಚ್ಬಿ ಬಡಾವಣೆಗೆ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಅಂದಾಜು ₹30 ಅವಶ್ಯವಿದೆ. ಆ ಹಣವನ್ನು ಗೃಹಮಂಡಳಿಯಿಂದ ದೊರಕಿಸಿಕೊಡುವುದಾದರೆ ಕಾಮಗಾರಿ ಮಾಡಲು ನಾವು ಸಿದ್ಧ. ಇಲ್ಲದಿದ್ದರೆ ನೀವು ರಚಿಸಿರುವ ಬಡಾವಣೆಯನ್ನು ನಿಮ್ಮಲ್ಲೇ ಇಟ್ಟುಕೊಂಡು ನಿರ್ವಹಣೆ ಮಾಡಿಕೊಳ್ಳಿ’ ಎಂದು ಸದಸ್ಯ ಎಚ್.ಎಸ್. ಮಂಜು ಬೇಸರ ವ್ಯಕ್ತಪಡಿಸಿದರು.

ಸದಸ್ಯ ನಹೀಂ ಮಾತನಾಡಿ, ‘ನಗರದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಸಂಪೂರ್ಣ ನಿಷ್ಕ್ರಿಯವಾಗಿದೆ. ನಗರ ವ್ಯಾಪ್ತಿಯಲ್ಲಿರುವ ಗಾಂಧೀನಗರ ಮುಸ್ಲಿಂ ಬ್ಲಾಕ್, ಕಲ್ಲಹಳ್ಳಿ ಮುಸ್ಲಿಂ ಬ್ಲಾಕ್ ಸೇರಿದಂತೆ ಇನ್ನಿತರ ಕೊಳಚೆ ಪ್ರದೇಶಗಳಲ್ಲಿ ಸುಮಾರು 500 ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡು ಆರು ವರ್ಷಗಳು ಕಳೆದರೂ ಇದುವರೆಗೆ 200 ಮನೆಗಳನ್ನಷ್ಟೇ ಪೂರ್ಣಗೊಳಿಸಿದ್ದಾರೆ’ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

‘ಕರೀಗೌಡ ಎಂಬುವರೇ ಗುತ್ತಿಗೆದಾರರಾಗಿದ್ದಾರೆ. ಇವರು ಸಕಾಲಕ್ಕೆ ಮನೆಗಳನ್ನು ನಿರ್ಮಿಸಿ ಪ್ರಮಾಣಪತ್ರಗಳನ್ನು ನೀಡಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ. ಮನೆಗಳ ನಿರ್ಮಾಣವನ್ನು ಅಧಿಕೃತ ಗುತ್ತಿಗೆದಾರ ಉಪಗುತ್ತಿಗೆಗಳನ್ನು ನೀಡಿದ್ದು, ಅವರೊಂದಿಗೆ ಸೇರಿಕೊಂಡು ಅರ್ಧಂಬರ್ಧ ಮನೆಗಳನ್ನು ನಿರ್ಮಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್ಕುಮಾರ್, ಆಯುಕ್ತರಾದ ಪಂಪಾಶ್ರೀ ಭಾಗವಹಿಸಿದ್ದರು.

Highlights - ಕೊಳೆಗೇರಿ ಮಂಡಳಿ ನಗರದೊಳಗೆ ನಿಷ್ಕ್ರಿಯ ಮಂಡಳಿಗೆ ಸರ್ಕಾರದಿಂದ ನಯಾಪೈಸೆ ಬಂದಿಲ್ಲ ನಿರ್ಮಾಣವಾಗದ 500 ಮನೆ: ಸದಸ್ಯರ ಕಿಡಿ

Cut-off box - ಕಾಮಗಾರಿಗಳ ಸಮಗ್ರ ತನಿಖೆಗೆ ಆಗ್ರಹ ಸದಸ್ಯ ಭಾರತೀಶ್ ಮಾತನಾಡಿ ಗುಡಿಸಲು ಹಾಕಿಕೊಂಡು ಪರದೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ನಿಮಗೆ ಸ್ವಲ್ಪವೂ ಮಾನವೀಯತೆ ಇಲ್ಲವಾ 500 ಮನೆಗಳನ್ನು ನಿರ್ಮಿಸಲು ಆರು ವರ್ಷ ಬೇಕಿತ್ತಾ ಇಂತಹ ದುರವಸ್ಥೆ ನೋಡಿದರೆ ನಾಚಿಕೆಯಾಗುತ್ತದೆ ಎಂದು ಕಿಡಿಕಾರಿದಾರು. ‘ಮಂಡ್ಯ ನಗರ ವ್ಯಾಪ್ತಿಗೆ ಕಳೆದ ಐದು ವರ್ಷಗಳಿಂದ ಸರ್ಕಾರದಿಂದ ನಯಾಪೈಸೆ ಹಣ ಬಂದಿಲ್ಲ. ನಾವು ಏನು ಮಾಡೋಣ’ ಎಂದು ಕೊಳಚೆ ಮಂಡಳಿ ಅಧಿಕಾರಿ ನಾಗೇಂದ್ರ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಕೊಳೆಗೇರಿ ಮಂಡಳಿ ನಗರದೊಳಗೆ ನಿಷ್ಕ್ರಿಯವಾಗಿದೆ. ಮಂಡಳಿಯಿಂದ ನಡೆಸಲಾಗಿರುವ ಕಾಮಗಾರಿಗಳನ್ನು ಸಮಗ್ರ ತನಿಖೆಗೊಳಪಡಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುವಂತೆ ನಿರ್ಣಯ ಮಾಡುವಂತೆ ಎಚ್.ಎಸ್. ಮಂಜು ಅವರು ಸಭೆಯನ್ನು ಒತ್ತಾಯಿಸಿದಾಗ ಉಳಿದ ಸದಸ್ಯರು ಮೇಜುತಟ್ಟಿ ಬೆಂಬಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.