ಕಿಕ್ಕೇರಿ: ರಾಜ್ಯ ಹೆದ್ದಾರಿಯಲ್ಲಿರುವ ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿ ಮುಂಜಾನೆ ವೇಳೆ ಬಹುತೇಕ ಬಸ್ಗಳು ನಿಲ್ದಾಣದ ಒಳಗಡೆ ಬಾರದಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ರಾಜ್ಯ ಹೆದ್ದಾರಿ ಬಳಿ ಇರುವ ಕಿಕ್ಕೇರಿ ಬಸ್ನಿಲ್ದಾಣ ಇದ್ದು ನಿತ್ಯ ಶಿವಮೊಗ್ಗ, ಸಿರಸಿ, ಪಣಜಿ, ಹುಬ್ಬಳ್ಳಿ, ದಾಂಡೇಲಿ, ಮೈಸೂರು ಮತ್ತಿತರ ಪ್ರದೇಶಗಳಿಗೆ ಈ ಮಾರ್ಗವಾಗಿ ಬಸ್ ಓಡಾಡಲಿವೆ. ಮುಂಜಾನೆ ವೇಳೆ ಹಲವು ಬಸ್ಗಳು ಬಸ್ನಿಲ್ದಾಣದ ಒಳಗಡೆ ಬಾರದೆ ಹೆದ್ದಾರಿಯಲ್ಲಿಯೇ ಬಸ್ ನಿಲುಗಡೆ ಮಾಡುವುದರಿಂದ ಪ್ರಯಾಣಿಕರಿಗೆ ಬಸ್ ಹತ್ತಲು ಗಲಿಬಿಲಿಯಾಗುತ್ತಿದೆ.

ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಂತ್ ಬಸ್ ಬರುವುದನ್ನೆ ಕಾಯುತ್ತ ಬಸ್ ಬಂದ ಕೂಡಲೆ ಬಸ್ ನಿಲ್ದಾಣಕ್ಕೆ ಹೋದಾಗ ಬಸ್ ನೋಡಿಕೊಂಡು ರಸ್ತೆ ಬದಿಯಲ್ಲಿ ನಿಂತಿರುವ ಪ್ರಯಾಣಿಕರು ಓಡುವಂತಾಗಿದೆ. ಬಸ್ ಒಳಗಡೆ ನಿಲ್ಲುತ್ತದೆ ಅಥವಾ ಹೊರಗಡೆ ನಿಲ್ಲುತ್ತದೆ ಎಂಬ ಆತಂಕ ಪ್ರಯಾಣಿಕರಿಗೆ ಆಗಿದೆ.

ಹೆದ್ದಾರಿಯಲ್ಲಿ ವಾಹನಗಳು ಎಡಬಿಡದೆ ಚಲಿಸುವುದರಿಂದ ರಸ್ತೆ ದಾಟಿಕೊಂಡು ನಿಲ್ದಾಣಕ್ಕೆ ದಿಢೀರನೆ ಹೋಗಲು ಪ್ರಯಾಣಿಕರಿಗೆ ಕಷ್ಟವಾಗಿದೆ. ರಾತ್ರಿ ವೇಳೆ ಬೀದಿ ನಾಯಿಗಳು ಬಸ್ನಿಲ್ದಾಣವನ್ನು ವಾಸಸ್ಥಳ ಮಾಡಿಕೊಂಡಿದ್ದು, ಪ್ರಯಾಣಿಕರ ಮೇಲೆ ಆಗಾಗ ದಾಳಿ ಮಾಡುತ್ತಿವೆ.

ನಿತ್ಯ ಚನ್ನರಾಯಪಟ್ಟಣ, ಕೆ.ಆರ್.ಪೇಟೆ, ಮೈಸೂರು, ಮಂಡ್ಯ, ಆದಿಚುಂಚನಗಿರಿ ವಿದ್ಯಾಕೇಂದ್ರಗಳಿಗೆ ವಿದ್ಯಾರ್ಥಿಗಳು ಮುಂಜಾನೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳಸಬೇಕಿದೆ. ಮಕ್ಕಳು, ವಯೋವೃದ್ಧರು, ಗರ್ಭಿಣಿಯರು, ರೋಗಿಗಳಿಗೆ, ಕೂಲಿ ಕಾರ್ಮಿಕರು, ವಿವಿಧೆಡೆ ನೌಕರಿ ಕೆಲಸ ಮಾಡುವವರು ಬಸ್ಗೆ ಹತ್ತುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಓಡಿ ಬಂದು ಬಸ್ ಹತ್ತಲು ಮುಂದಾದರೆ ಮೊದಲೆ ಬಸ್ಗಳು ಪ್ರಯಾಣಿಕರಿಂದ ತುಂಬಿರುವುದರಿಂದ ಬಸ್ ಹತ್ತಲು ಕಷ್ಟವಾಗಿ ನಿತ್ಯ ಗಲಾಟೆ ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಿಲ್ದಾಣಕ್ಕೆ ಟ್ರಾಫಿಕ್ ಕಂಟ್ರೋಲರ್ ನೇಮಿಸಿ, ಕಡ್ಡಾಯವಾಗಿ ಬಸ್ನಿಲ್ದಾಣದ ಒಳಗಡೆ ಬರುವಂತೆ ಕ್ರಮವಹಿಸಬೇಕು ಎಂದು ಸಾಮಾಜಿಕ ಸೇವಾಕರ್ತ ಗುರುಮೂರ್ತಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-40-452108808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.