ಕಿಕ್ಕೇರಿ: ‘ಶಿಕ್ಷಣ ಇಲಾಖೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಲವಾರು ಯೋಜನೆಗಳನ್ನು ತಂದಿದ್ದು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಂದಾಗಿ’ ಎಂದು ಶಿಕ್ಷಣ ಸಂಯೋಜಕ ನವೀನ್ಕುಮಾರ್ ಹೇಳಿದರು.

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಉತ್ತಮ ಕಲಿಕೆ-ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಉತ್ತಮ ಕಲಿಕೆ-ಉಜ್ವಲ ಭವಿಷ್ಯ’ ಈ ವರ್ಷದ ಶಿಕ್ಷಣ ಇಲಾಖೆ ಘೋಷವಾಕ್ಯ ಆಗಿದೆ. ತಾಲ್ಲೂಕಿನಲ್ಲಿಯೇ ಕಿಕ್ಕೇರಿ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆ ಆಗಿದೆ. ತಾಲ್ಲೂಕಿನಲ್ಲಿ 290 ಸರ್ಕಾರಿ ಪ್ರಾಥಮಿಕ, 34 ಪ್ರೌಢಶಾಲೆಗಳಿವೆ. ಇವುಗಳ ಬಲವರ್ಧನೆಗೆ ಸಹಕರಿಸಿ. ಸರ್ಕಾರಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ 100 ಫಲಿತಾಂಶ ಲಭಿಸಲು ಗುಣಾತ್ಮಕ ಶಿಕ್ಷಣ ಕಾರಣ ಆಗಿದೆ’ ಎಂದರು. ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ‘ಈ ಬಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಕಲಿಕೆ- ಉಜ್ವಲ ಭವಿಷ್ಯದ ಘೋಷವಾಕ್ಯವನ್ನು ಪಾಲಿಸಿ ಶಾಲೆ, ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕು’ ಎಂದರು.

ಶಿಕ್ಷಣ ಸಂಯೋಜಕ ಜೆ.ಎಸ್. ಸುರೇಶ್ ನಿರಂತರ ಕಲಿಕೆಯ ಮಾಹಿತಿ ನೀಡಿದರು. ಗಿರೀಶ್, ಮಹಮದ್ ರಿಜ್ವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-40-657359833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.