ಕಿಕ್ಕೇರಿ: ಗ್ರಾಮದ ರಕ್ಷಕಿ ದೇವಿ ಪಿರಿಯಪಟ್ಟಣದಮ್ಮನವರ ವಾರ್ಷಿಕ ಪೂಜಾ ಮಹೋತ್ಸವವನ್ನು ಗಂಗೇನಹಳ್ಳಿ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಶುಕ್ರವಾರದಿಂದ ಎರಡು ದಿನಗಳ ಕಾಲ ಜರುಗಿದ ಹಬ್ಬದಲ್ಲಿ ಎತ್ತ ನೋಡಿದರೂ ಭಕ್ತರಿಂದ ತುಂಬಿತ್ತು. ಗ್ರಾಮದ ಮಹಿಳೆಯರು ಮೂಲದೇವರ ಗುಡಿಯ ಅಮ್ಮನಿಗೆ ಬ್ರಾಹ್ಮಿ ಮುಹೂರ್ತದಲ್ಲಿ ನಿಂಬೆಹಣ್ಣಿನ ಆರತಿ ಸೇವೆ ಸಲ್ಲಿಸಿ ನಿರ್ವಿಘ್ನವಾಗಿ ಹಬ್ಬ ಜರುಗಲು ಪ್ರಾರ್ಥಿಸಿದರು.

ಅರ್ಚಕರು ದೇವಿಯ ಗರ್ಭಗುಡಿಯ ಮುಂದೆ ಬಾಳೆ ಕಂದು ನೆಟ್ಟು, ಛೇದಿಸಿ ದೃಷ್ಟಿ ತೆಗೆದು ದೇವಿಯ ಗುಡಿಯ ಮೆಟ್ಟಿಲುಪೂಜೆ ಸಲ್ಲಿಸಿ ಒಳ ಪ್ರವೇಶಿಸಿದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಸುಭಿಕ್ಷೆಗೆ ದೇವಿಯಲ್ಲಿ ಮೊರೆಯಿಟ್ಟರು.

ಮಂಗಳವಾದ್ಯ, ತಮಟೆವಾದ್ಯ, ಬಾಣ ಬಿರುಸುವಿನೊಂದಿಗೆ ಗ್ರಾಮದಿಂದ ಕಿಕ್ಕೇರಿಯ ಅಮಾನಿಕೆರೆ, ಕಿಕ್ಕೇರಮ್ಮ ದೇಗುಲದವರೆಗೆ ಮೆರವಣಿಗೆ ಸಾಗಿತು. ಜೊತೆಯಲ್ಲಿ ಯಲ್ಲಮ್ಮದೇವಿ ಅಡ್ಡೆದೇವರ ಮೆರವಣಿಗೆ ಮಾಡಲಾಯಿತು. ಗಂಗಾಜಲವನ್ನು ಕಳಸದಲ್ಲಿ ತುಂಬಿ ದೇವಿಯ ಅವಾಹನೆಗೊಳಿಸಲಾಯಿತು. ದೇವಿಯ ಹೊಂಬಾಳೆ ಕಳಸವನ್ನು ಅರ್ಚಕರು, ಮಹಿಳೆಯರು, ಕಿಶೋರಿಯರು ಹೊತ್ತು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಸಾಗಿದರು.

ದಾರಿಯುದ್ದಕ್ಕೂ ಈಡುಗಾಯಿ ಹಾಕಿ ದೇವಿಯನ್ನು ಸಂತೃಪ್ತಗೊಳಿಸಲಾಯಿತು. ಇಡೀ ಗ್ರಾಮವನ್ನು ತಳಿರು ತೋರಣ, ಪುಷ್ಪ, ವಿದ್ಯುತ್ದೀಪಗಳಿಂದ ಅಲಂಕರಿಸಲಾಗಿತ್ತು. ಮನೆಯ ಮುಂದೆ ಚಿತ್ತಾಕರ್ಷಕ ರಂಗವಲ್ಲಿ ಬಿಡಿಸಲಾಗಿತ್ತು. ಮೂಲಗುಡಿಯಲ್ಲಿನ ಪಿರಿಯಪಟ್ಟಣದಮ್ಮನಿಗೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ, ಸುಗಂದ್ರ ದ್ರವ್ಯಗಳ ಅಭಿಷೇಕ ನೆರವೇರಿಸಲಾಯಿತು. ವಿವಿಧ ಪರಿಮಳ ಪುಷ್ಪ, ಆಭರಣ, ವಸ್ತ್ರಗಳಿಂದ ಅಲಂಕಾರ ಮಾಡಲಾಗಿತ್ತು.

ಹಬ್ಬಕ್ಕಾಗಿ ಬಡವ ಬಲ್ಲಿದರು ಎನ್ನದೆ ಎಲ್ಲರೂ ಒಟ್ಟಾಗಿ ಸೇರಿ ಗ್ರಾಮದ ಹೃದಯಭಾಗದಲ್ಲಿನ ದೇವಿಗೆ ಸಿಹಿಯೂಟದ ನೈವೇದ್ಯ ಅರ್ಪಿಸಿದರು. ಗ್ರಾಮದ ಹೊರಭಾಗದಲ್ಲಿರುವ ಗುಡಿಯಲ್ಲಿ ದೇವಿಗೆ ಕುರಿ ಬಲಿ ನೀಡಿ ನೈವೇದ್ಯ ಸಮರ್ಪಿಸಿದರು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಸುಮಾರು ನೂರು ಮನೆಗಳಿರುವ ಗ್ರಾಮದಲ್ಲಿ ಎತ್ತ ನೋಡಿದರೂ ಭಕ್ತರ ದಂಡು, ನೆಂಟರಿಷ್ಟರು, ಸುತ್ತಮುತ್ತಲಿನ ಗ್ರಾಮಸ್ಥರು ಕಂಡುಬಂದರು. ಗಂಗಾಸ್ನಾನ, ಗಂಗಾಪೂಜೆ, ಪೂರ್ಣಕುಂಭ ಮೆರವಣಿಗೆ, ಮಡಿ ಪೂಜೆ, ಕೊಂಡೋತ್ಸವ, ಬಂಡಿ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಹಬ್ಬದ ಸಲುವಾಗಿ ಕೋಳಿ, ಕುರಿಗಳ ಬಲಿಯನ್ನು ದೇವಿಗೆ ಅರ್ಪಿಸಿ, ಅತಿಥಿಗಳಿಗೆ ಸತ್ಕಾರ ನೀಡಿದರು.
ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ವಿಜೃಂಭಣೆಯಿಂದ ಹಬ್ಬ ಆಚರಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.