ಕಿಕ್ಕೇರಿ: ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಭಾನುವಾರ ಜರುಗಿದ ಹನುಮಂತೋತ್ಸವದಲ್ಲಿ ವಿಪ್ರರು ಬಣ್ಣ ಹಚ್ಚಿಕೊಂಡು ವಾನರರಂತೆ ಕುಣಿದಾಡಿದರು.

ಉತ್ಸಾಹದಿಂದ ಹಿರಿಯರು, ಕಿರಿಯರು, ಯುವಕರು, ಯುವತಿಯರು ಎನ್ನದೆ ಎಲ್ಲರೂ ಬಣ್ಣದ ಓಕುಳಿಯಾಟವನ್ನು ಹಾಡಿ ಸಂಭ್ರಮಿಸಿದರು. ಹನುಮ ದೇವರ ಉತ್ಸವ ಅದ್ದೂರಿಯಾಗಿ ಸಾಗಿದಾಗ ಭಕ್ತರು ತಮ್ಮ ಮನೆ ಮುಂದೆ ಆಗಮಿಸಿದ ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮನೆಯ ಮುಂದೆ ಬಕೆಟ್, ಬಿಂದಿಗೆಯಲ್ಲಿದ್ದ ಅರಿಸಿನ, ಕೆಂಪು, ನೀಲಿ, ಹಸಿರು ಸೇರಿದಂತೆ ವಿವಿಧ ವರ್ಣದ ನೀರನ್ನು ಪೈಪೋಟಿಯಲ್ಲಿ ಎರಚಾಡಿದರು. ಬಣ್ಣಗಳ ಪುಡಿಯನ್ನು ಮುಖಕ್ಕೆ ಮೆತ್ತಿಕೊಂಡು ಆನಂದಿಸಿದರು. ದಾರಿಯುದ್ದಕ್ಕೂ ಭಲೇ ಭಲೇ ಹನುಮ, ಬಜರಂಗಿ ಹನುಮ ಎಂದು ಘೋಷಣೆ ಕೂಗುತ್ತ ಸಾಗಿದರು.

ಕೆ.ಬಿ. ವೆಂಕಟೇಶ್, ನರಸಿಂಹ, ಕೆ.ಎಸ್. ಪ್ರಭಾಕರ್, ಮಹಬಲಶರ್ಮ, ಕೆ.ಎಸ್.ಪರಮೇಶ್ವರಯ್ಯ, ಶ್ರೀಹರಿ, ರಘು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-40-2046023931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.