ಕಿಕ್ಕೇರಿ: ಬಾದಾಮಿ ಅಮಾವಾಸ್ಯೆ ಹಾಗೂ ಶನೇಶ್ವರಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಕೋಟೆ ವೀರಾಂಜನೇಯಸ್ವಾಮಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶನಿವಾರ ಸಂಜೆ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು.

ಅರ್ಚಕ ವೆಂಕಟೇಶ್ ಪವನಸುತನಿಗೆ ಸಂಕಲ್ಪ ಪೂಜೆ ನೆರವೇರಿಸಿದರು. ಬಳಿಕ ಎಣ್ಣೆ ಮಜ್ಜನ ಸೇವೆ ನಡೆಯಿತು. ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ದ್ರಾಕ್ಷಿ, ಗೋಡಂಬಿ ಮತ್ತಿತರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಸಿದ್ದರೂಢಸ್ವಾಮಿ ಮಠದಲ್ಲಿನ ಶನೇಶ್ವರ, ಲಕ್ಷ್ಮೀಪುರ, ತುಳಸಿಗೇಟ್ ಬಳಿಯ ಶನೇಶ್ವರ ಗುಡಿಯಲ್ಲಿ ಶನೇಶ್ವರ ಜಯಂತಿ ಅಂಗವಾಗಿ ಭಕ್ತರು ದೇವರಿಗೆ ಎಳ್ಳೆಣ್ಣೆ ಸೇವೆ ನೆರವೇರಿಸಿದರು. ಕಪ್ಪು ವಸ್ತ್ರದಲ್ಲಿ ಕರಿಎಳ್ಳಿನ ಉಂಡೆ ಕಟ್ಟಿಕೊಂಡು ದೀಪ ಹಚ್ಚಿ ಕಷ್ಟಗಳನ್ನು ಬಗೆಹರಿಸಲು ಪ್ರಾರ್ಥಿಸಿದರು.

ಬ್ರಹ್ಮೇಶ್ವರ ಮೂರ್ತಿ, ಕಾಲಭೈರವೇಶ್ವರ, ಕಿಕ್ಕೇರಮ್ಮ ದೇಗುಲ, ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ದೊಡ್ಡತರಹಳ್ಳಿ ವೀರಭದ್ರೇಶ್ವರಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಚಿಕ್ಕಳಲೆ ಚಿಕ್ಕಳಮ್ಮ, ಮಂದಗೆರೆ ಕಟ್ಟೆಪರಮೇಶ್ವರಿ, ಗುಂಡುಮಾರಿಯಮ್ಮ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-1528416537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.