ಕಿಕ್ಕೇರಿ: ಹೋಬಳಿಯ ವಿವಿಧೆಡೆ ಮುಸ್ಲಿಮರು ಸಂಭ್ರಮ, ಸಡಗರದಿಂದ ಅಲ್ಲಾನ ಸ್ಮರಿಸಿ ಈದ್ ಅಲ್ ಅಧಾಹಬ್ಬದ ಸಂತಸದ ಸವಿ ಸವಿದರು.

ಹೊಸ ಉಡುಗೆ ತೊಡುಗೆ ತೊಟ್ಟು ಜಾಮೀಯಾ ಮಸೀದಿಯಲ್ಲಿ ಗುರುವಾರ ಎಲ್ಲರೂ ಜಮಾಯಿಸಿ, ಮಂಡಿಯೂರಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಕೋಟೆ ಗಣಪತಿ, ಆಂಜನೇಯ ಬೀದಿ, ರಥಬೀದಿ, ಮಂದಗೆರೆ ರಸ್ತೆ ಮೂಲಕ ಸಾಗಿದರು. ಹಿರಿಯರೊಂದಿಗೆ ಪುಟಾಣಿ ಮಕ್ಕಳು ಮೆರವಣಿಗೆಯಲ್ಲಿ ಜೊತೆಗೂಡಿದರು. ಹೊರವಲಯದಲ್ಲಿನ ಈದ್ಗಾ ಮೈದಾನದಲ್ಲಿ ಜಮಾಯಿಸಿ, ಖುಷಿಯಿಂದ ಅಲ್ಲಾನ ಪ್ರಾರ್ಥಿಸಿದರು.

ಧರ್ಮಗುರು ಫಕ್ರಿಯ ಆಲಂ ಅವರು ಧರ್ಮಗ್ರಂಥ ಕುರಾನ್ ಪಠಣೆ ಮಾಡಿದರು. ಅಲ್ಲಾನ ಅಣತಿಯಂತೆ ಸೌಹಾರ್ದ ಸಾರಲು ಮುಂದಾಗಬೇಕು. ಎಲ್ಲ ಧರ್ಮದ ಸಾರ ಶಾಂತಿಯಾಗಿದೆ. ಮಾನವ ಜನ್ಮ ಪವಿತ್ರವಾಗಿದೆ. ಶಾಂತಿ, ನೆಮ್ಮದಿ, ದಾನ, ಧರ್ಮಕ್ಕೆ ಮುಂದಾಗಬೇಕು. ತ್ಯಾಗ, ಪ್ರೀತಿ, ಭ್ರಾತೃತ್ವ, ಬಲಿದಾನದ ಸಂಕೇತವಾದ ಹಬ್ಬದಂದು ಬಡವರಿಗೆ ಉಳ್ಳವರು ದಾನ ಮಾಡಬೇಕು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-40-1790308900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.