ಕಿಕ್ಕೇರಿ: ‘ಆಧುನಿಕ ತಂತ್ರಜ್ಞಾನ ಯುಗದಲ್ಲಿ ಧಾರ್ಮಿಕ ಚಿಂತನೆ, ಆಧ್ಯಾತ್ಮ ಬದುಕು ಉಸಿರಾಗಿದೆ ಎನ್ನಲು ಗ್ರಾಮೀಣ ಪ್ರದೇಶದಲ್ಲಿರುವ ಶ್ರದ್ಧೆ, ಭಕ್ತಿ ಕಾರಣವಾಗಿದೆ’ ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ಹೇಳಿದರು.

ಹೋಬಳಿಯ ಲಿಂಗಾಪುರ ಗ್ರಾಮದೇವತೆ ಕನ್ನಂಬಾಡಮ್ಮ ನೂತನ ದೇಗುಲ ನಿರ್ಮಾಣಕ್ಕೆ ಶನಿವಾರ ಆರ್ಥಿಕ ಸಹಾಯದ ನೆರವು ನೀಡಿ ಅವರು ಮಾತನಾಡಿದರು.

‘ಧಾರ್ಮಿಕವಾಗಿ ಭಕ್ತಿ ಮಾರ್ಗದ ಮೂಲಕ ಶಕ್ತಿ ನೀಡಿ ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ದೇಗುಲಗಳ ಮೂಲಕ ದೇವರು ನೆಮ್ಮದಿ ನೀಡಿದ್ದಾನೆ. ಈ ಗ್ರಾಮದಲ್ಲಿ ಮನೆಕೆಲಸ ಬಿಟ್ಟು ಸ್ವಂತ ಕೆಲಸದಂತೆ ಸುಂದರ ದೇಗುಲ ನಿರ್ಮಾಣಕ್ಕೆ ಕಾರಣವಾಗಿರುವ ಗ್ರಾಮಸ್ಥರು ಮಾದರಿಯಾಗಿದ್ದಾರೆ’ ಎಂದರು.

‘ಗ್ರಾಮಸ್ಥರು ಧಾರ್ಮಿಕ ಚಿಂತನೆಗಳ ಜತೆ ಗ್ರಾಮಾಭಿವೃದ್ಧಿಗೆ ಮುಂದಾಗಿ, ಚಿಂತನಾಶೀಲ ಬದುಕು ರೂಢಿಸಿಕೊಳ್ಳಿ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಕಾಯಕಕ್ಕೆ ಮುಂದಾದರೆ ಬದುಕಿನಲ್ಲಿ ಸಾರ್ಥಕತೆಯ ಅರ್ಥ ಕಾಣಬಹುದು’ ಎಂದರು.

ಈಚೆಗೆ ಕೆರೆಗೆ ಕಾಲುಜಾರಿ ಬಿದ್ದು ಮೃತಪಟ್ಟ ಯುವಕ ಅರುಣಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮುಖಂಡರಾದ ಕೆಂಗಯ್ಯ, ಬಸಪ್ಪ, ಬಸವಯ್ಯ, ಶಂಕರಯ್ಯ, ಸುಖೇಂದ್ರ, ಪುಟ್ಟರಾಜು, ಮಹಾದೇವ, ಸ್ವಾಮಿ, ನಿಂಗರಾಜು, ಶಿವರಾಜು, ಸಣ್ಣಯ್ಯ, ಪಾಪಯ್ಯ, ದೊಡಣ್ಣ, ಗಂಜಿಗೆರೆ ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.