ಕಿಕ್ಕೇರಿ: ಪಟ್ಟಣದ ಸುಬ್ಬರಾಯರ ಛತ್ರದಲ್ಲಿ ಅನಿಲ್ಶಾಸ್ತ್ರಿ, ಗೌರಿಶಂಕರ್ ಪೌರೋಹಿತ್ವದಲ್ಲಿ ಶುಕ್ರವಾರ ಜರುಗಿದ ಸೀತೆ, ರಾಮದೇವರ ಕಲ್ಯಾಣ ಮಹೋತ್ಸವಕ್ಕೆ ವಿವಿಧ ಊರುಗಳಿಂದ ಬಂದಿದ್ದ ವಿಪ್ರ ವೃಂದದವರು ಸಾಕ್ಷಿಯಾದರು.

ಸೀತಾದೇವಿ, ರಾಮದೇವರ ಮೂರ್ತಿ ವಿಗ್ರಹವನ್ನು ಮಂಗಳವಾದ್ಯದೊಂದಿಗೆ ಸುಬ್ಬರಾಯ ಛತ್ರ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ವೇದಘೋಷ ಪಠಣೆ ಮಾಡಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಕಲ್ಯಾಣೋತ್ಸವದ ಸೇವಾರ್ಥದಾರರಾದ ಗೀತಾ ನಾರಾಯಣಮೂರ್ತಿ ಕುಟುಂಬದವರು ವಧು ವರರ ಪರವಾಗಿ ವಿವಿಧ ಮಂಗಳ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಮಹಾಗಣಪತಿ ಪೂಜೆ, ಅಂಕುರಾರ್ಪಣೆ, ದೇವತಾನಾಂದಿ, ನವಗ್ರಹ ಪೂಜೆ, ಕಳಸಸ್ಥಾಪನೆ, ಹೋಮಗಳು, ಕನ್ಯಾ ವರಣ, ವರಪೂಜೆ, ಫಲ ಪೂಜೆ, ಸ್ತಂಭ ಮೂಹೂರ್ತ, ಭತ್ತದ ಶಾಸ್ತ್ರ ನಡೆದವು. ಕನ್ಯಾದಾನ ಮಾಡಿ ಮಹಾಸಂಕಲ್ಪ, ಕಂಕಣಧಾರಣೆ, ಮಾಂಗಲ್ಯಧಾರಣೆ ಜರುಗಿದವು. ದೇವರಿಗೆ ಮಹಾಮಂಗಳಾರತಿ ಮಾಡಿ, ತೀರ್ಥ ಪ್ರಸಾದ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-40-1823119785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.