ಕಿಕ್ಕೇರಿ: ಧರ್ಮ, ಸಂಸ್ಕಾರ, ಅಧ್ಯಾತ್ಮ ಉಳಿಯಲು ಧಾರ್ಮಿಕ ಸೇವೆಯಾಗಿ ಪಾದಯಾತ್ರೆಯಲ್ಲಿ ದೇಗುಲ ದರ್ಶನ ಆರೋಗ್ಯಕರ ಬೆಳವಣಿಗೆ ಎಂದು ಜನಜಾಗೃತಿ ವೇದಿಕೆ ನಿರ್ದೇಶಕ ಮೊಟ್ಟೆ ಮಂಜು ತಿಳಿಸಿದರು.

ಕಿಕ್ಕೇರಿಯ ಮಂಜುನಾಥಸ್ವಾಮಿ ಪಾದಯಾತ್ರೆ ಸೇವಾ ಸಮಿತಿಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಮಂಜುನಾಥಸ್ವಾಮಿ ದೇಗುಲ ದರ್ಶನಕ್ಕೆ ಕೈಗೊಂಡಿರುವ 14ನೇ ವರ್ಷದ ಪಾದಯಾತ್ರೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾನ ಮನಸ್ಕರನ್ನು ಸಂಘಟಿಸಿ ಪಾದಯಾತ್ರೆ ಮೂಲಕ ಧಾರ್ಮಿಕ ಜಾಗೃತಿ, ಭಗವಂತನ ಆರಾಧನೆಗೆ ಕಾಳಜಿ ವಹಿಸಿರುವುದು ಒಳ್ಳೆಯ ಬೆಳವಣಿಗೆ. ಕಿರಿಯರು, ಯುವಕರಲ್ಲಿ ಧಾರ್ಮಿಕ ಭಾವನೆ ಮೂಡಲು ಇಂತಹ ಯಾತ್ರೆ ಅವಶ್ಯವಿದೆ ಎಂದರು.

ಶ್ರೀ ಕ್ಷೇತ್ರಕ್ಕೆ ಹೋಬಳಿಯ ಜನತೆ ಮತಭೇದ ಮರೆತು ಸಂಘಟಿತರಾಗುತ್ತಿರುವುದು ಒಳ್ಳೆಯ ಸತ್ಕಾರ್ಯ. ಸನಾತನ ಸಂಸ್ಕೃತಿಯ ದೇಶ ನಮ್ಮದಾಗಿದೆ. ಹಿಂದೂ ರಾಷ್ಟ್ರದಲ್ಲಿ ಇಂತಹ ಕಾಲ್ನಡಿಗೆಯಂತಹ ಯಾತ್ರೆಗಳು ಎಲ್ಲೆಡೆ ನಡೆಯಬೇಕಿದೆ. ಹಿರಿಯರು, ಕಿರಿಯರು, ಯುವಕರಲ್ಲಿ ಉತ್ತಮ ಬಾಂಧವ್ಯ ಮೂಡಲಿದೆ. ಇಂತಹ ಸತ್ಕಾರ್ಯಗಳಿಂದ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಸ್ವಲ್ಪವಾದರೂ ಭಯಭಕ್ತಿ ಉಳಿಯಲಿದೆ ಎಂದು ಆಶಿಸಿದರು.

ಒಂದಿಬ್ಬರು ಕೂಡಿಕೊಂಡು ಆರಂಭಿಸಲಾದ ಈ ಪಾದಯಾತ್ರೆಗೆ ಅನೇಕರು ಒಗ್ಗೂಡಿಕೊಂಡು ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಗ್ರಾಮ ಗ್ರಾಮಗಳ ಜನರಲ್ಲಿ ಮಧುರವಾದ ಬಾಂಧವ್ಯ ಮೂಡಲು ಸಹಕಾರಿಯಾಗಲಿದೆ ಎಂದು ನುಡಿದರು.

ಇಲ್ಲಿನ ಸಿಂಗಮ್ಮ ದೇಗುಲದಲ್ಲಿ ಪಾದಯಾತ್ರಿಗಳ ಯಾತ್ರೆ ಶುಭಕರವಾಗಲು ವಿಶೇಷ ಪೂಜೆ ಸಲ್ಲಿಸಲಾಯಿತು. ಗೀತಾ, ಭಾಮಾ ಸೇರಿದಂತೆ ವಿವಿಧ ಗ್ರಾಮಗಳ ಸದ್ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.