ಹಲಗೂರು: ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಾತಿ, ಧರ್ಮ, ಭಾಷೆ, ಮತ್ತು ಆಚರಣೆಗಳಲ್ಲಿ ವೈವಿಧ್ಯ ಇದ್ದರೂ ದೇಶವನ್ನು ಒಂದಾಗಿ ಕಟ್ಟುವ ಶಕ್ತಿ ನಮ್ಮ ಸಂವಿಧಾನದಲ್ಲಿದೆ ಎಂದು ಪಿಎಸ್ಐ ಲೋಕೇಶ್ ತಿಳಿಸಿದರು.

ಸಮೀಪದ ಕೊನ್ನಾಪುರ ಗ್ರಾಮದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವ ಮತ್ತು ಅಂಬೇಡ್ಕರ್ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಸರ್ವರಿಗೂ ಹಕ್ಕು, ಅಧಿಕಾರಗಳ ಜೊತೆಗೆ ಸಮಾನ ಅವಕಾಶಗಳನ್ನು ನೀಡಿದ್ದು, ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಿ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಚಿರಾಗ್ ಎಸ್.ಮೂರ್ತಿ, ಡಿ.ಪೂಜಾಶ್ರೀ, ಸುಕೃತಾ, ಹೇಮಾವತಿ, ಪಲ್ಲವಿ, ಕೆ.ಎಸ್.ಮೊಹೀತ್, ಕೆ.ಜಿ.ಪ್ರೀತಮ್, ಆರ್.ಪ್ರೀತಮ್ ಗೌಡ, ಕೆ.ಆರ್.ಸುಶಾಂತ್, ಎ.ಅಮೃತ ಅವರನ್ನು ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್. ಸಿದ್ದರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಲಿಂಗೇಗೌಡ, ಮಂಗಳಮ್ಮ, ಗ್ರಾಮಸ್ಥರಾದ ಕೆ.ಬಿ.ಜಯಶಂಕರ್, ಕೆ.ಬಿ.ಆನಂದಕುಮಾರ್, ಕೆ.ಜಿ.ಸಿದ್ದಲಿಂಗಮೂರ್ತಿ, ಕೆ.ಟಿ.ಗಿರೀಶ್, ಕೆ.ಎಸ್.ಮನೋಜ್ ಕುಮಾರ್, ವಸಂತಕುಮಾರ, ಮಧುಸೂಧನ್, ದೇವರಾಜು, ಕೆ.ಎನ್.ಗಿರೀಶ್ ಕುಮಾರ್, ಮುದ್ದಯ್ಯ, ನಾಗಸಿದ್ದಯ್ಯ, ಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-40-1607167915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.