ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಸಮೀಪದ ಬೆಟ್ಟದಹೊಸೂರು ಗ್ರಾಮದಲ್ಲಿರುವ ಬೋಳಾರೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಗ್ರಾಮದ ಕರಿಬೆಟ್ಟೇಗೌಡರ ಕುಟುಂಬದವರು ಲೋಕಕಲ್ಯಾಣಾರ್ಥ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿರುವ 38 ಅಡಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಲೋಕಾರ್ಪಣೆ ಮತ್ತು ಬೆಟ್ಟದ ಕೆಳಗೆ 15 ಅಡಿ ಎತ್ತರದ ಗಣಪತಿ ವಿಗ್ರಹದ ಪ್ರತಿಷ್ಠಾಪನಾ ಪೂಜೆ ಸಮಾರಂಭವು ಸೋಮವಾರ ನೆರವೇರಿತು.

ದೇವಸ್ಥಾನದ ಅರ್ಚಕರಾದ ಎಚ್.ಪಿ ಸುಂದರ್ ಮತ್ತು ಬಿ.ಆರ್.ಮನೋಹರ್ ನೇತೃತ್ವ ವಹಿಸಿದ್ದರು. ಗ್ರಾಮದ ಕರಿಬೆಟ್ಟೇಗೌಡರ ಕುಟುಂಬದ ಕುಮಾರ್ ಅವರು ತಮ್ಮ ಮಗಳ ಸ್ಮರಣಾರ್ಥ ಶ್ರೀ ಕ್ಷೇತ್ರದಲ್ಲಿ ಗವಿರಂಗಾಥಸ್ವಾಮಿ ದೇಗುಲ, ಬನ್ನಿ ಮಂಟಪ, ನವಗ್ರಹ ಮಂಟಪ ನಿರ್ಮಿಸಿಕೊಟ್ಟಿದ್ದು, ಈಗ ಬೆಟ್ಟದ ಮೇಲೆ 35 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ನಿರ್ಮಿಸಿಕೊಟ್ಟು ಪ್ರಾಚೀನ ಇತಿಹಾಸ ಹೊಂದಿರುವ ಬೋಳಾರೆ ರಂಗನಾಥ ಸ್ವಾಮಿ ಕ್ಷೇತ್ರವನ್ನು ಭಕ್ತರ ತಪೋಭೂಮಿಯನ್ನಾಗಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕಲ್ಯಾಣಿ ಜೀರ್ಣೋದ್ಧಾರಕ್ಕೂ ಮುಂದಾಗಿರುವುದುದು ಹೆಮ್ಮೆಯ ವಿಚಾರ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಿ.ಟಿ.ವೆಂಕಟೇಶ್ ತಿಳಿಸಿದರು.

ಸೇವಾರ್ಥದಾರರಾದ ಕರಿಬೆಟ್ಟೇಗೌಡ ಮಾತನಾಡಿ, ಕ್ಷೇತ್ರದಲ್ಲಿ ದೇವಸ್ಥಾನ ನಿರ್ಮಿಸಬೇಕು ಮತ್ತು ಬೆಟ್ಟದ ಮೇಲೆ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂಬ ದೈವ ಪ್ರೇರಣೆಯಾಯಿತು. ಮೃತಪಟ್ಟಿರುವ ಮಗಳ ನೆನಪಿಗಾಗಿ ಈ ಧಾರ್ಮಿಕ ಕಾರ್ಯಗಳನ್ನು ಗ್ರಾಮಸ್ಥರು ಮತ್ತು ಭಕ್ತರ ನೆರವಿನಿಂದ ಮಾಡಿದ್ದೇನೆ. ಮುಂದೆ ಎಲ್ಲರೂ ಸಹಕಾರ ಕೊಟ್ಟರೆ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.

ಕರಿಬೆಟ್ಟೇಗೌಡರ ಕುಟುಂಬದ ಸದಸ್ಯರು, ಡಾ.ರಂಗಸ್ವಾಮಿ ಪಾಪಣ್ಣ ಕುಟುಂಬದವರು, ಮುಖಂಡರಾದ ಪಟೇಲ್ ಸ್ವಾಮಣ್ಣ, ಕುಮಾರ್, ನಾಗೇಂದ್ರ, ಚಲುವರಾಜು, ಸರ್ವಮಂಗಳ ವೆಂಕಟೇಶ್, ಸೋಮೇಗೌಡ, ಸಂತೋಷ್, ಮಹೇಶ್, ದಿನೇಶ್, ಪಟೇಲ್ ಕುಮಾರ್, ರಾಜಣ್ಣ, ಬೆಟ್ಟದ ಹೊಸೂರಿನ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-40-2038270779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.