ಕೆ.ಆರ್.ಪೇಟೆ: ಪಟ್ಟಣದ ಈಶ್ವರ ದೇವಾಲಯದಲ್ಲಿ ಶಂಕರ ಜಯಂತಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ನಡೆದವು. ಸಂಜೆ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ದೇವಸ್ಥಾನದ ರಾಜಬೀದಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಬ್ರಾಹ್ಮಣ ಸಮುದಾಯದ ನೂರಾರು ಮಂದಿ ಮೆರವಣಿಗೆಯಲ್ಲಿ ಶಂಕರರ ಗೀತೆ ಮತ್ತು ಸ್ತೋತ್ರಗಳನ್ನು ಪಠಣ ಮಾಡಿದರು.

ಧಾರ್ಮಿಕ ಮತ್ತು ಸಂಸ್ಕೃತಿ ಚಿಂತಕ ಗೋಪಾಲಕೃಷ್ಣ ಅವಧಾನಿ ಮಾತನಾಡಿ, ‘ಶಂಕರಾಚಾರ್ಯರ 1,238ನೇ ಜನ್ಮದಿವಸ ನಾವಿಂದು ಆಚರಿಸುತ್ತಿದ್ದು, ಶಂಕರರು ಜನಿಸಿದ್ದ ಸಮಯದಲ್ಲಿ ಸನಾತನ ಧರ್ಮಕ್ಕೆ ತಲೆದೋರಿದ್ದ ಅಪಾಯಗಳು ಮತ್ತೆ ತಲೆಎತ್ತಿದ್ದು, ನಮ್ಮ ಸಂಸ್ಕೃತಿ ಮತ್ತು ಚಿಂತನೆಗಳನ್ನು ಉಳಿಸಿಕೊಂಡು ಭಾರತವನ್ನು ವಿಶ್ವ ಗುರುವಾಗಿಸುವ ನಿಟ್ಟಿನಲ್ಲಿ ಸನಾತನಧರ್ಮದ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಿದೆ’ ಎಂದು ಹೇಳಿದರು.

‘8ನೇ ಶತಮಾನದಲ್ಲಿ ಸಂಕಷ್ಟದಲ್ಲಿದ್ದ ಸನಾತನ ಧರ್ಮ, ಅದರ ಪರಂಪರೆ ಮತ್ತು ಸಂಸ್ಕೃತಿ ಆಚಾರ -ವಿಚಾರಗಳನ್ನು ಸದೃಢಗೊಳಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ವೇದ, ಉಪನಿಷತ್ತು, ಪುರಾಣ ಮಹಾಕಾವ್ಯ ಮತ್ತು ಭಗವದ್ಗೀತೆಗೆ ಭಾಷ್ಯ ಬರೆದು ಸಂರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ತಾಲ್ಲೂಕು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಘುರಾಮ್ ನಾಡಿಗ್, ಸಮುದಾಯದ ಮುಖಂಡರಾದ ರಾಮಚಂದ್ರು, ಸುಬ್ಬು ನರಸಿಂಹ, ಅನಂತರಾಮಯ್ಯ, ಮಂಜುನಾಥ್, ಹರೀಶ್, ಶ್ರೀನಿವಾಸ್, ವಾಸಣ್ಣ, ಈಶ್ವರ್, ರಾಜಾರಾಮ್, ಅರ್ಚಕರಾದ ರೋಹಿತ್ ಶರ್, ಮಾಲತೇಶ್ ಭಟ್ಟ, ಗಿರೀಶ್, ಸತೀಶ್, ವಿಠಲ್ ಹೆಗಡೆ, ಮಾರ್ತಾಂಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-40-205366797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.