ಕೆ.ಆರ್.ಪೇಟೆ: ಗಂಟುರೋಗದಿಂದ ಜಾನುವಾರುಗಳು ಮೃತಪಡುತ್ತಿದ್ದು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿ ಪಟ್ಟಣದ ಪಶು ಆಸ್ಪತ್ರೆಯ ಮುಂಭಾಗದಲ್ಲಿ ಸತ್ತ ಎತ್ತಿನೊಂದಿಗೆ ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅಗ್ರಹಾರ ಬಡಾವಣೆಯ ಸುಬಾಷ್ ಎಂಬುವವರು ಇತ್ತೀಚೆಗೆ ₹2.5ಲಕ್ಷ ನೀಡಿ ಖರೀದಿಸಿದ್ದ ಜೋಡಿ ಎತ್ತುಗಳಲ್ಲಿ 1 ಗಂಟು ರೋಗದಿಂದ ಮೃತಪಟ್ಟಿತ್ತು. ರಾಸುಗಳಿಗೆ ರೋಗ ಹರಡಿರುವ ಬಗ್ಗೆ ಮಾಹಿತಿ ನೀಡಿದರೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದ್ದರಿಂದ ಸಾವು ಸಂಭವಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೋಗ ನಿರೋಧಕ ಲಸಿಕೆಗಳನ್ನು ಗ್ರಾಮೀಣಭಾಗದಲ್ಲಿ ಮಾತ್ರ ಹಾಕುತ್ತಿದ್ದು ಪಟ್ಟಣದಲ್ಲಿ ಇರುವ ಜಾನುವಾರುಗಳ ಬಗ್ಗೆ ಪಶುಇಲಾಖೆಯ ಅಧಿಕಾರಿಗಳು ಗಮನ ಹರಿಸದ ಕಾರಣದಿಂದಲೇ ಜಾನುವಾರುಗಳು ಸಾಯುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜ್ ಮಾತನಾಡಿ, ಇಲಾಖೆಯಲ್ಲಿ ಶೇ 60 ಹುದ್ದೆಗಳು ಖಾಲಿ ಇದ್ದು, ನಾವು ಈಗ ಇರುವ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಪಟ್ಟಣದಲ್ಲಿಯೂ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದೇವೆ. ಈಗ ಮೃತಪಟ್ಟಿರುವ ಹಸುವಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕೆ.ಪುರುಷೋತ್ತಮ್, ಕೆ.ಕೆ.ಚಂದ್ರಶೇಖರ್, ಪರಮೇಶ್, ಸುರೇಶ್, ಮಂಜುನಾಥ್, ಶಿವು, ಬಸವರಾಜ್, ಪರಮೇಶ್, ಶ್ರೀನಿವಾಸ್, ಪ್ರತಾಪ್, ಪುನೀತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-40-789828185

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.