ಕೆ .ಆರ್ .ಪೇಟೆ: ‘ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಡೆ ಒಡ್ಡುತ್ತಿದ್ದಾರೆ ಎಂಬುದಾಗಿ ಶಾಸಕ ಎಚ್. ಟಿ. ಮಂಜು ಸಭೆ – ಸಮಾರಂಭಗಳಲ್ಲಿ ಆರೋಪ ಮಾಡುತ್ತಿದ್ದು, ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಸಚಿವರಾಗಲಿ ಅಥವಾ ಕಾಂಗ್ರೆಸ್ ಮುಖಂಡರಾಗಲಿ ಅಧಿಕಾರಿಗಳ ಮೂಲಕ ತಡೆಯೊಡ್ಡಿದ್ದರೆ ಅದನ್ನು ಆಧಾರ ಸಮೇತ ಸಾಬೀತು ಪಡಿಸಲಿ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಎಲ್.ದೇವರಾಜು ಒತ್ತಾಯಿಸಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಎಚ್. ಟಿ. ಮಂಜು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಗಮನ ನೀಡದೆ, ಹಲವು ಸರ್ಕಾರಿ ಸಮಿತಿಗಳ ಸಭೆಗಳನ್ನು ನಡೆಸದೆ, ಎಲ್ಲೆಂದರಲ್ಲಿ ತಾನು ವಿರೋಧ ಪಕ್ಷದ ಶಾಸಕ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ದೂರುತ್ತಿದ್ದಾತ್ತಾರೆ. ಆದರೆ ಪ್ರತಿದಿನ ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ, ಉದ್ಘಾಟನೆ, ಶಿಲನ್ಯಾಸ ಮಾಡುತ್ತಾರೆ. ಹಾಗಾದರೆ ಈ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಂದ ಅನುದಾನ ಬಂತು ? ಎಂಬುದನ್ನು ಶಾಸಕರು ತಿಳಿಸಬೇಕು ಎಂದು ಒತ್ತಾಯಿಸಿದರು.

‘ಯಾವುದೇ ಪಕ್ಷದ ಸರ್ಕಾರ ತನ್ನ ಪಕ್ಷದ ಶಾಸಕರಿಗೆ ಹೆಚ್ಚು ಒತ್ತು ನೀಡುವುದು ಸಹಜ. ಅಂತಹ ಸಂದರ್ಭದಲ್ಲಿ ಬುದ್ದಿವಂತರಾದವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದೊಂದಿಗೆ ವಿಶ್ವಾಸ ಬೆಳೆಸಿಕೊಂಡು ಅನುದಾನ ತೆಗೆದುಕೊಳ್ಳಬೇಕು ’ ಎಂದು ಸಲಹೆ ನೀಡಿದರು.

ಪ್ರತಿನಿತ್ಯ ನೂರಾರು ಸಂಖ್ಯೆಯ ರೈತರು ತಾಲ್ಲುಕು ಕಚೇರಿ ಕೆಲಸಗಳಿಗೆ ಅಲೆ ದಾಡುತ್ತಾರೆ. ಅದನ್ನು.ಬಗೆಹರಿಸುವ ಯಾವುದೇ ಪ್ರಯತ್ನವನ್ನು ಶಾಸಕರು ಮಾಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಶಾಸಕರು ಕಚೇರಿ ತೆರೆದಿದ್ದರೂ ಅಲ್ಲಿ ರೈತರ ಸಮಸ್ಯೆಗಳನ್ನು ವಿಚಾರಿಸಿ. ಟ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನವನ್ನು ಮಾಡಲು ಯಾರು ತಡೆಒಡ್ಡಿದ್ದಾರೆಂದು ಅವರು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಅನುದಾನ ನೀಡಿದ್ದು, ಶಾಸಕರು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚಿಸುವಂತೆ ಒತ್ತಾಯಿಸಿದರು. ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ಅಗ್ರಹಾರ ಬಾಚಳ್ಳಿ ಕುಮಾರ್ , ಬಸ್ತಿ ರಂಗಪ್ಪ ಇಲಾಯತ್ ಪಾಷಾ, ಗುಡುಗನಹಳ್ಳಿ ರಾಯಪ್ಪ, ಹೆತ್ತಗೋನಹಳ್ಳಿ ನಾರಾಯಣಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-40-1627405983

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.