ಬುಧವಾರ, ನವೆಂಬರ್ 13, 2019
28 °C

ಕೆ.ಆರ್‌.ಪೇಟೆ: ವಿವಿಧೆಡೆ ಭರ್ಜರಿ ಬಾಡೂಟ

Published:
Updated:

ಕೆ.ಆರ್‌.ಪೇಟೆ: ವಿಧಾನಸಭೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ತಾಲ್ಲೂಕಿನ ವಿವಿಧೆದೆ ಭರ್ಜರಿ ಬಾಡೂಟ ಔತಣಕೂಟಗಳು ಸಾಮಾನ್ಯವಾಗುತ್ತಿವೆ.

ಗುರುವಾರ ಸಾದುಗೋನಹಳ್ಳಿ ಗ್ರಾಮದ ಮೈದಾನದಲ್ಲಿ ಬೆಂಬಲಿಗರ ಸಭೆ ಆಯೋಜಿಸಿದ್ದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ 2 ಸಾವಿರಕ್ಕೂ ಹೆಚ್ಚು ಜನರಿಗೆ ಬಾಡೂಟ ಆಯೋಜನೆ ಮಾಡಿದ್ದರು. ಕ್ವಿಂಟನ್‌ಗಟ್ಟಲೆ ಮಾಂಸ ತಯಾರು ಮಾಡಲಾಗಿತ್ತು. ಕುರಿ, ಕೋಳಿ ಮಾಂಸವನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿತ್ತು. ರಾಗಿ ಮುದ್ದೆ, ಮೊಟ್ಟೆಯನ್ನು ಜನರು ಸವಿದರು.

ತಾವೇನೂ ಕಡಿಮೆ ಇಲ್ಲ ಎಂಬಂತೆ ಜೆಡಿಎಸ್‌ ಮುಖಂಡರು ಸ್ಪರ್ಧೆಗೆ ಬಿದ್ದವರಂತೆ ಬಾಡೂಟ ಹಾಕಿಸುತ್ತಿದ್ದಾರೆ. ಹರಳಹಳ್ಳಿ ಸಮೀಪದ ನೀತಿಮಂಗಲ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು. ಅಲ್ಲೂ 2 ಸಾವಿರಕ್ಕೂ ಹೆಚ್ಚು ಜನರು ಬಾಡೂಟ ಸವಿದರು.

ಪ್ರತಿಕ್ರಿಯಿಸಿ (+)