ಕೆ.ಆರ್.ಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶ್ರೀರಾಮನವಮಿಯನ್ನು ಶುಕ್ರವಾರ ಆಚರಿಸಲಾಯಿತು.

ಭಕ್ತರು ದೇವಸ್ಥಾನ, ಶ್ರೀರಾಮಮಂದಿರ, ಸೇರಿದಂತೆ ಗ್ರಾಮದ ರಂಗಸ್ಥಳಗಳಲ್ಲಿ ರಾಮಚಂದ್ರನ ಪೋಟೊಗಳನ್ನು ಇಟ್ಟು ಪುಚ್ಪಾರ್ಚನೆ ಮಾಡಿದರು. ನಂತರ ಗ್ರಾಮದ ಬೀದಿಗಳಲ್ಲಿ ಉತ್ಷವ ಮೂರ್ತಿಯ ಮೆರವಣಿಗೆ ಮಾಡಿದರು. ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿ, ಮೊಸರನ್ನ ಪ್ರಸಾದ ನೀಡಲಾಯಿತು.

ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಬ್ರಾಹ್ಮಣರ ರಾಮಮಂದಿರದಲ್ಲಿ ವೇದ ಘೋಷಗಳೊಂದಿಗೆ ವಿಶೇಷ ಪೂಜೆ ನಡೆಯಿತು. ರಾಮಮಂದಿರದ ಅಧ್ಯಕ್ಷರಾದ ಅನಂತರಾಮಯ್ಯ ಅವರ ನೇತೃತ್ವದಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಐದು ದಿನಗಳ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಅಗ್ರಹಾರ ಬಡಾವಣೆಯ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕೆ.ಎಸ್ ಕುಮಾರ್ ನೇತೃತ್ವದಲ್ಲಿ ರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪಟ್ಟಣದ ಚಾಮುಂಡೇಶ್ವರಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ರಾಮನವಮಿ ಪೂಜಾ ಕಾರ್ಯಕ್ರಮ ನಡೆಯಿತು. ತಾಲ್ಲೂಕಿನ ಹೊಸಹೊಳಲು, ಬಲ್ಲೇನಹಳ್ಖಿ, ತೆಂಡೇಕೆರೆ, ಬೂಕನಕೆರೆ, ಶೀಳನೆರೆ, ಅಕ್ಕಿಹೆಬ್ಬಾಳು, ಭೂವರಾಹನಾಥ ಕಲ್ಲಹಳ್ಳಿ, ಲಕ್ಷ್ಮೀಪುರ, ಕುಪ್ಪಹಳ್ಳಿ ಯಲ್ಲಿ ರಾಮನವಮಿ ಆಚರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-40-1917938496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.