ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಷನ್, ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಕ್ಕಳ ವಿಶೇಷ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ 10 ಮತ್ತು 11ರಂದು ಸಂಜೆ 6 ಗ್ರಾಮದ ಸರ್ಕಾರಿ ಪ್ರೌಢಶಾಲೆಯ ರಂಗಮಂದಿರದಲ್ಲಿ ನಡೆಯಲಿದೆ.

ಮೇ10ರಂದು ಮಕ್ಕಳಿಂದ ತ್ರಿಪುರ ಸಂಹಾರ ಮತ್ತು ಜಟಾಯಿ ಮೋಕ್ಷ ಮೂಡಲಪಾಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೇ 11ರಂದು ಆನೆ ಬಂತೋ ಆನೆ ಮತ್ತು ಚಿಕ್ ಮಾರಿ ದೊಡ್ ಮಾರಿ ನಾಟಕಗಳು ಪ್ರದರ್ಶನವಾಗಲಿವೆ. ಮೊಹಮದ್ ಅಜರುದ್ದೀನ್ ಬರೆದಿರುವ ನನ್ನ ವಿಳಾಸ ಕೃತಿ ಬಿಡುಗಡೆ, ಹಿರಿಯ ಲೇಖಕಿ ವಾಣಿ ಸುಬ್ಬಯ್ಯ ಅವರಿಗೆ ರಂಗಗೌರವ, ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ ಮತ್ತು ಪತ್ರಕರ್ತ ಕಿಕ್ಕೇರಿ ಬಲರಾಮು ಅವರಿಗೆ ಸನ್ಮಾನ ನಡೆಯಲಿದೆ. ಸಮಾರಂಭದಲ್ಲಿ ಶಾಸಕ ಎಚ್.ಟಿ.ಮಂಜು ಭಾಗವಹಿಸುವರು ಎಂದು ಲೋಕಾಯನ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಶಶಿಧರ್ ಬಾರಿಘಾಟ್ ಮತ್ತು ಸಂಚಾಲಕ ಅಕ್ಕಿಹೆಬ್ಬಾಳು ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.