ಕೆ ಆರ್.ಪೇಟೆ: ತಾಲ್ಲೂಕಿನ ತೆಂಡೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಿಗೆ ಬಿಡುಗಡೆಯಾಗಿದ್ದ ಎಂಟು ತಿಂಗಳ ಗೌರವಧನವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಸದಸ್ಯರಿಗೆ ಪಾವತಿ ಮಾಡಿಲ್ಲವೆಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒ ವಿರುದ್ಧ ಆರೋಪಿಸಿದ್ದಾರೆ.

ಈ ಬಗ್ಗೆ ದಾಖಲೆಗಳ ಸಮೇತ ಲಿಖಿತ ಹೇಳಿಕೆ ನೀಡಿರುವ ಮಾಜಿ ಗ್ರಾ.ಪಂ. ಸದಸ್ಯರು 2024ರ ನವೆಂಬರ್ನಿಂದ 2025ರ ಜೂನ್ವರೆಗಿನ ₹3.20 ಲಕ್ಷವನ್ನು ಸದಸ್ಯರಿಗೆ ಪಾವತಿ ಮಾಡಬೇಕಿತ್ತು. ಆದರೆ ಸಬೂಬುಗಳನ್ನು ಹೇಳುತ್ತಾ ಪಂಚಾಯಿತಿ ಅವಧಿ ಮುಗಿದರೂ ಪಾವತಿ ಮಾಡಿಲ್ಲವೆಂದು ದೂರಿದ್ದು ಈ ಸಂಬಂದ ತಾಲ್ಲೂಕು ಪಂಚಾಯಿತಿ ಇಒ ಅವರಿಗೂ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ದೂರಿದ್ದಾರೆ.

ಸರ್ಕಾರದ ವತಿಯಿಂದ ಬಿಡುಗಡೆಯಾದ ಗೌರವಧನದ ಹಣವನ್ನು ಅಂದಿನ ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್ ಸದಸ್ಯರ ಗಮನಕ್ಕೆ ತರದೇ ಅನ್ಯ ಕಾರ್ಯಗಳಿಗೆ ಬಳಸಿಕೊಂಡಿರುತ್ತಾರೆ. ಈ ವಿಚಾರವಾಗಿ ಫೆಬ್ರವರಿಯಲ್ಲಿ ನಡೆದ ಸದಸ್ಯರ ಕೊನೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ವಿಚಾರವನ್ನು ಸಭಾ ನಡಾವಳಿ ಪುಸ್ತಕದಲ್ಲಿ ನಮೂದಿಸದೇ, ಮೌಖಿಕವಾಗಿ ಗೌರವಧನದ ಹಣವನ್ನು ಸ್ವತಂ ಕೈಯಿಂದ ಬರಿಸಲು ಪಿಡಿಒ ಕುಮಾರ್ ಒಪ್ಪಿಕೊಂಡಿದ್ದರಾದರೂ ಹಣವನ್ನು ಭರಿಸಿಲ್ಲ. ತಾಲ್ಲೂಕು ಪಂಚಾಯಿತಿ ಇಒ ಕೆ. ಸುಷ್ಮಾ ಕ್ರಮಕೈಗೊಂಡು ಸದಸ್ಯರ ಗೌರವಧನ ಬಿಡುಗಡೆಗೊಳಿಸುವಂತೆ ಸದಸ್ಯರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-40-449266878

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.