ಗುರುವಾರ , ಅಕ್ಟೋಬರ್ 17, 2019
24 °C

ಕೆಆರ್‌ಎಸ್‌: ಸಂಗೀತ ರಸಸಂಜೆ, ಮಿಮಿಕ್ರಿ

Published:
Updated:
Prajavani

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ನಿಮಿತ್ತ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸಂಗೀತ ರಸಸಂಜೆ ಜನಮನ ರಂಜಿಸಿತು.

ದೋಣಿ ವಿಹಾರ ಕೇಂದ್ರದ ಸಮೀಪದ ವೇದಿಕೆಯಲ್ಲಿ ಗಾಯಕಿ ಶಮಿತಾ ಮಲ್ನಾಡ್‌ ಅವರ ಗಾಯನವನ್ನು ಪ್ರವಾಸಿಗರು ಆಸ್ವಾದಿಸಿದರು.

‘ಜೋಕೆ, ನಾನು ಬಳ್ಳಿಯ ಮಿಂಚು’, ‘ಗಿಲಿ ಗಿಲಿ ಗಿಲಕ್‌’, ಬಯಲು ದಾರಿ ಚಿತ್ರದ ‘ಬಾನಲ್ಲು ನೀನೇ ಭುವಿಯಲ್ಲಿ ನೀನೆ’, ಬಂಗಾರ ಮನುಷ್ಯದ ‘ಬಾಳ ಬಂಗಾರ ನೀನು’ ಇತರ ಹಾಡುಗಳ ಹಾಡಿದ ಶಮಿತಾ ಕೇಳುಗರ ಮನಸೂರೆಗೊಂಡರು. ಗಾಯಕ ಸಂತೋಷ್‌ ಅವರು ‘ಸಲಾಂ ರಾಕಿಭಾಯ್‌’ ಇತರ ಹಾಡುಗಳನ್ನು ಹಾಡಿದರು. ನಾಗಶೇಖರ್‌ ಇತರರಿಂದಲೂ ಹಾಡುಗಳು ಹೊಮ್ಮಿದವು.

ಮಿಮಿಕ್ರಿ ಕಲಾವಿದ ದಯಾನಂದ್‌ ಚಿತ್ರನಟರಾದ ಡಾ.ರಾಜಕುಮಾರ್‌, ಬಾಲಕೃಷ್ಣ, ಶಂಕರನಾಗ್‌, ಅಂಬರೀಷ್‌, ಪ್ರಭಾಕರ್‌ ಅವರ ಧ್ವನಿಗಳನ್ನು ಅನುಕರಿಸಿದರು. ರಾಜಕಾರಣಿಗಳಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ ಇತರರ ದನಿಯಲ್ಲೂ ಮಾತನಾಡಿದರು.

Post Comments (+)