ಪಾಂಡವಪುರ (ಮಂಡ್ಯ ಜಿಲ್ಲೆ): ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ.

ಕೃಷ್ಣರಾಜ ಸಾಗರ ಜಲಾಶಯದ ಬೋರೆ ಆನಂದೂರು ಸಮೀಪದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇವಾಲಯ ಮೂರು ವರ್ಷಗಳ ಹಿಂದೆ 2023ರಲ್ಲಿ ಗೋಚರವಾಗಿತ್ತು.

ಕೆ.ಆರ್. ಸಾಗರ ಅಣೆಕಟ್ಟೆಯ ನಿರ್ಮಾಣ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆಯೇ ದೇವರ ಮೂರ್ತಿಯನ್ನು ಸ್ಥಳಾಂತರ ಮಾಡಲಾಗಿತ್ತು. ಉಳಿದಿದ್ದ ಗೋಪುರ ಮತ್ತು ದೇವಸ್ಥಾನ ಕಂಬಗಳು ಈಗ ಕಾಣಿಸಿಕೊಂಡಿವೆ.

ನಾರಾಯಣಸ್ವಾಮಿ ದೇಗುಲವು ಸುತ್ತಮುತ್ತಲಿನ ಹತ್ತು ಗ್ರಾಮಗಳ ಮನೆ ದೇವರಾಗಿದೆ. ಮಜ್ಜಿಗೆರ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಮೂಲ ದೇವರಾದ ನಾರಾಯಣಸ್ವಾಮಿ ದೇವರಿಗೆ ನಿತ್ಯ ಪೂಜೆಗಳು ನಡೆಯುತ್ತಿವೆ.

ಬೋರೆ ಆನಂದೂರು ಗ್ರಾಮದ ಬಳಿಯ ಕಗ್ಗಲಿ ಅರಣ್ಯ ವಲಯದ ಪಕ್ಕದ ಕೆ.ಆರ್. ಸಾಗರ ಹಿನ್ನೀರಿನ ಸಮೀಪದಲ್ಲಿ ಈರಣ್ಯ ಮತ್ತು ಸೂರಣ್ಣ ಎಂಬ ಎರಡು ದೇವರ ವಿಗ್ರಹಗಳು ಕಾಣ ಸಿಗುತ್ತಿವೆ. ಈ ಎರಡು ಕಲ್ಲುಗಳಲ್ಲಿ ಶಿವನ ಪೂಜೆ ಮಾಡುತ್ತಿರುವುದು ಮತ್ತು ವಿವಿಧ ಭಂಗಿಗಳಲ್ಲಿ ಕೆತ್ತನೆ ಕಂಡು ಬಂದಿದೆ. ಈ ಬಗ್ಗೆ ಹಳೆಗನ್ನಡದಲ್ಲಿ ಬರಹವಿದೆ. ಆದರೆ, ಸತತವಾಗಿ ಹಿನ್ನೀರಿನಲ್ಲಿ ಮುಳುಗಿರುವ ಕಾರಣ ಮಸುಕಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.