117 ಅಡಿ ದಾಟಿದ ಕೆಆರ್‌ಎಸ್‌ ಜಲಾಶಯ

7

117 ಅಡಿ ದಾಟಿದ ಕೆಆರ್‌ಎಸ್‌ ಜಲಾಶಯ

Published:
Updated:
117.70 ಅಡಿಗೆ ತಲುಪಿರುವ ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್‌ ಜಲಾಶಯದ ನೋಟ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ 37 ಸಾವಿರ ಕ್ಯುಸೆಕ್‌ ದಾಟಿದೆ.

ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 117.70 ಅಡಿಗೆ ತಲುಪಿದೆ. 37,783 ಕ್ಯುಸೆಕ್‌ ಒಳಹರಿವು, 3,768 ಹೊರಹರಿವು ಇದೆ. ಜುಲೈ 10ರಂದು 114 ಅಡಿ ನೀರಿತ್ತು, ಕಳೆದ ಎರಡು ದಿನಗಳಿಂದ ಜಲಾಶಯಕ್ಕೆ 3.70 ಅಡಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ 78.80 ಅಡಿ ನೀರು ಸಂಗ್ರಹವಾಗಿತ್ತು. 2,683 ಕ್ಯುಸೆಕ್‌ ಒಳಹರಿವು, 2,133 ಕ್ಯುಸೆಕ್‌ ಹೊರಹರಿವು ಇತ್ತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !