ಶುಕ್ರವಾರ, ಏಪ್ರಿಲ್ 16, 2021
28 °C

ಕಾಳೇನಹಳ್ಳಿ: ರೈತನ ಮೇಲೆ ಚಿರತೆ ದಾಳಿ, ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಕ್ಕೇರಿ: ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತನ ಮೇಲೆ ಚಿರತೆಯೊಂದು ಭಾನುವಾರ ಸಂಜೆ ದಾಳಿ ಮಾಡಿದೆ.

ಗ್ರಾಮದ ಗೂಡೆಹೊಸಹಳ್ಳಿ ಶಿವೇಗೌಡರ ಪುತ್ರ ದರ್ಶನ್ ಚಿರತೆ ದಾಳಿಗೆ ಒಳಗಾದವರು.

ಕಬ್ಬು ಬೆಳೆದಿದ್ದ ತಮ್ಮ ಜಮೀನಿನಲ್ಲಿ ಅವರ ಕುಟುಂಬ ವರ್ಗದವರು ಕೆಲಸ ಮಾಡುತ್ತಿದ್ದರು. ಚಿರತೆಯು ಜಮೀನಿನಲ್ಲಿ ನುಸುಳಿಕೊಂಡು ಓಡಿ ಹೋಗುವಾಗ ಹತ್ತಿರದಲ್ಲೇ ಇದ್ದ ಮನೆಯವರ ಬಳಿ ಧಾವಿಸಿದೆ. ಇದನ್ನು ಕಂಡು ದರ್ಶನ್ ಚಿರತೆ ಓಡಿಸಲು ಮುಂದಾಗಿದ್ದಾರೆ. ಚಿರತೆ ಕೂಡಲೇ ಅವರ ಮೇಲೆ ಎಗರಿ ಪರಿಚಿ ಓಡಿ ಹೋಗಿದೆ. ಪರಿಣಾಮ ಹೊಟ್ಟೆ, ಕೈ ಕಾಲುಗಳಿಗೆ ಗಾಯಗಳಾಗಿವೆ.

ಕಿಕ್ಕೇರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ಜಾನುವಾರುಗಳು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ರೈತರ ಮೇಲೆ ದಾಳಿ ಮಾಡಲಾರಂಭಿಸಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.