ಮಂಡ್ಯ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್. ಸತೀಶ್ ಅವರ ಮನೆ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕಿಂತ ₹3.01 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.

ಸರ್ಕಾರಿ ಅಧಿಕಾರಿಯಾಗಿ ಇದುವರೆಗಿನ ಸತೀಶ್ ಅವರ ಒಟ್ಟು ಆದಾಯ ₹1.45 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಸ್ಥಿರಾಸ್ತಿ ₹2.19 ಕೋಟಿ ಮತ್ತು ಚರಾಸ್ತಿ ₹2.26 ಕೋಟಿ ಸೇರಿದಂತೆ ಒಟ್ಟು ₹4.46 ಕೋಟಿ ಆಸ್ತಿ ಹೊಂದಿರುವುದು ತನಿಖೆಯಿಂದ ಬಯಲಾಗಿದೆ.

ಲೋಕಾಯುಕ್ತ ಪೊಲೀಸರು ಸತೀಶ್ ಅವರಿಗೆ ಸೇರಿದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು. ₹97 ಲಕ್ಷ ಮೌಲ್ಯದ 3 ನಿವೇಶನಗಳು, ₹1.06 ಕೋಟಿ ಮೌಲ್ಯದ 2 ಮನೆಗಳು, ₹16 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.

ಮನೆಯಲ್ಲಿ ₹6.70 ಲಕ್ಷ ನಗದು, ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆ, ಎಫ್ಡಿ, ಲ್ಯಾಂಡ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ₹1.77 ಕೋಟಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಪತ್ತೆ ಮಾಡಿದ್ದಾರೆ. ಕಾವೇರಿ ಸತ್ವದಲ್ಲಿ 2 ನಿವೇಶನಗಳು, ಬಿಡದಿಯಲ್ಲಿ 1 ಪ್ಲಾಟ್ ಇರುವುದನ್ನು ಗುರುತಿಸಿದ್ದಾರೆ.

‘ಕಾನೂನುಬದ್ಧ ಆದಾಯ ಮೂಲವನ್ನು ತೋರಿಸಲು ಕಾಲಾವಾಕಾಶ ನೀಡಲಾಗುವುದು. ಕಾರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ಕಂಡು ಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.