ಮಂಗಳವಾರ, ಜೂನ್ 15, 2021
26 °C

ನಷ್ಟ: ರೇಷ್ಮೆ ಬೆಳೆ ನಾಶ ಮಾಡಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ರೇಷ್ಮೆ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟವಾದ ಕಾರಣ ಇಲ್ಲಿಯ ರೈತರೊಬ್ಬರು ಮನನೊಂದು ಗುರುವಾರ 1 ಎಕರೆಯಲ್ಲಿ
ಬೆಳೆದಿದ್ದ ರೇಷ್ಮೆ ಬೆಳೆಯನ್ನು ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿ ನಾಶಪಡಿಸಿದ್ದಾರೆ.

ಸಮೀಪದ ಹರಳಕೆರೆ ಗ್ರಾಮದ ರೈತ ಗಿರೀಶ್ ರೇಷ್ಮೆ ನಾಶ ಮಾಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗೆ ಸೂಕ್ತ  ಬೆಲೆ ಸಿಗುತ್ತಿಲ್ಲ. ಮೂರು ವರ್ಷಗಳ ಹಿಂದೆ ಕೆ.ಜಿ ರೇಷ್ಮೆಗೆ ಸರ್ಕಾರ ₹ 40 ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಈಗ  ಅದನ್ನು ನಿಲ್ಲಿಸಲಾಗಿದೆ. ರೆಷ್ಮೆ ಬೆಳೆಯಿಂದ ಲಾಭಕ್ಕಿಂತ ಖರ್ಚು ಜಾಸ್ತಿಯಾಗಿದೆ. ಹೀಗಾಗಿ ಬೆಳೆ ನಾಶ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

‘₹ 3 ಲಕ್ಷ ಸಾಲ ಮಾಡಿ ರೇಷ್ಮೆ ಬೇಸಾಯ ಮಾಡಿದ್ದೆ, ಹುಳುವಿನ ಮನೆ ನಿರ್ಮಾಣ ಮಾಡಿ, ಕೊಳವೆ ಬಾವಿ ಕೊರೆಸಿದ್ದೆ. ಹಾಕಿದ್ದ ಹಣವೂ
ಬಾರದೆ ನಷ್ಟವಾಗಿದ್ದು ರೇಷ್ಮೆ ಬೆಳೆ ನಿರ್ವಹಣೆ ಮಾಡಲು ಸಾಧ್ಯವಾಗದೇ ನೋವಿನಿಂದ ಬೆಳೆ ನಾಶ ಮಾಡಿದ್ದೇನೆ’ ಎಂದು ರೈತ ಗಿರೀಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.