ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಲ್ಲೇ ಯುವಕರ ಊಟ!

Last Updated 31 ಮಾರ್ಚ್ 2020, 16:46 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ: ಮುಂಬೈ, ಬೆಂಗಳೂರು ಸೇರಿ ವಿವಿಧೆಡೆಯಿಂದ ತಮ್ಮ ಊರುಗಳಿಗೆ ಬಂದಿರುವ ಯುವಜನರು ತೋಟಗಳಿಗೆ ತೆರಳಿ, ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ.

ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಬೇರೆ ನಗರಗಳಲ್ಲಿ ಕೆಲಸವಿಲ್ಲದೇ ಯುವಕರು ಊರಿಗೆ ಮರಳಿದ್ದಾರೆ. ಹೋಬಳಿ ವ್ಯಾಪ್ತಿಯ ನೂರಾರು ಜನರು ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೆಲವರಿಗೆ ಮನೆಯಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದಾರೆ.

ಮನೆಯಿಂದ ಹೊರಗೆ ಬಂದರೆ ಜನರು ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಹೀಗಾಗಿ ಅವರು ತಮ್ಮ ಸ್ನೇಹಿತರೊಂದಿಗೆ ತೋಟದ ಮನೆ ಸೇರಿದ್ದಾರೆ. ಅಲ್ಲೇ ಅಡುಗೆ, ಊಟ ಮಾಡಿ ಅಲ್ಲೇ ಮಲಗುತ್ತಾರೆ.

‘ಹಳ್ಳಿಗಳಲ್ಲಿ ಟಿ.ವಿ ನೋಡಲು ವಿದ್ಯುತ್ ಇರುವುದಿಲ್ಲ. ರಾತ್ರಿ ವಿದ್ಯುತ್ ಬರುತ್ತದೆ. ಅಲ್ಲಿಯ ತನಕ ನಾವು ಮನೆಯಲ್ಲೇ ಇರುವುದು ತುಂಬಾ ಕಷ್ಟವಾಗಿದೆ. ಹೊರಗೆ ಆಟವಾಡಲು ಬಂದರೆ ಪೊಲೀಸರ ಕಾಟವಿದೆ. ಆದ್ದರಿಂದ ನಾವುಗಳು ಸ್ನೇಹಿತರೊಂದಿಗೆ ತೋಟದಲ್ಲೇ ಅಡುಗೆ ಮಾಡಿ, ಊಟ ಮಾಡುತ್ತಿದ್ದೇವೆ’ ಎಂದು ಯುವಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT