ಮದ್ದೂರು: ನಗರ ಸೇರಿದಂತೆ ತಾಲ್ಲೂಕಿನ ಹಲವು ಹೋಬಳಿಗಳಲ್ಲಿಯೂ ಸೋಮವಾರ ಭಾರಿ ಮಳೆಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೊಪ್ಪದಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ಕೌಡ್ಲೆಗೆ ಹೋಗುವ ಮಾರ್ಗವು ಜಾಲಾವೃತಗೊಂಡು ವಾಹನ ಸವಾರರು ಪರದಾಡಿದರು. ಅಷ್ಟೇ ಅಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಭಾಗಶಃ ಮುಳುಗಿದವು.

ಹೋಬಳಿಯ ವಿವಿಧ ಭಾಗಗಳಲ್ಲಿ ಸೋಮವಾರ ಒಂದು ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಭಾರತೀನಗರ ಭಾಗದ ನಾಲೆಗಳಲ್ಲಿ ವಿ.ಸಿ.ನಾಲೆ ಆಧುನೀಕರಣ ಹಾಗೂ ಸೂಳೆಕೆರೆ ಹೂಳೆತ್ತುವ ಯೋಜನೆ ನಿಮಿತ್ತ ನೀರು ಸ್ಥಗಿತಗೊಂಡಿದ್ದು, ರೈತರ ಬೆಳೆಗಳಿಗೆ ನೀರು ಅಗತ್ಯವಾಗಿತ್ತು.

ಬಹಳ ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ ಮಳೆ ಬಂದಿರಲಿಲ್ಲ, ಸೋಮವಾರ ಸಂಜೆ 4.35ರ ವೇಳೆಗೆ ಆರಂಭವಾಗಿ 6.30ರವರೆವಿಗೂ ಸುರಿಯಿತು. ಸೋನೆಯಿಂದ ಆರಂಭಗಿ ಆನಂತರ ಬಿರುಸು ಪಡೆಯಿತು. ಮಳೆಯಿಂದ ಭಾರತೀ ಕಾಲೇಜಿನ ಬಳಿ ಮಳೆಯ ನೀರು ಸರಾಗವಾಗಿ ಚರಂಡಿಗೆ ಹರಿಯದಿದುದ್ದರಿಂದ ರಸ್ತೆಯಲ್ಲಿ ನೀರು ನಿಂತು ಕಾಲುವೆಯಂತಾಗಿತ್ತು.

‘ಮುಂಗಾರಿಗೂ ಮುಂಚಿತವಾಗಿ ಈ ಮಳೆ ಸುರಿದಿದ್ದರಿಂದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ. ಮೇ 26ರಂದು ಮುಂಗಾರು ಆಗಮಿಸುವ ಆಶಾಭಾವವಿದೆ’ ಎಂದು ರೈತ ಮುಖಂಡ ಕ್ಯಾತಘಟ್ಟ ಅಂದಾನಿಗೌಡ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-40-80308521

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.