ಪ್ರಥಮ ಬಹುಮಾನ ₹2 ಲಕ್ಷ
ಈ ಬಾರಿ ಶಾಸಕ ಕೆ.ಎಂ ಉದಯ್ ಅವರು ತಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ‘ಮದ್ದೂರು ಉತ್ಸವ’ದ ಭಾಗವಾಗಿ ಭಾರಿ ದನಗಳ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಮೊದಲನೇ ಚಾoಪಿಯನ್‌ಗೆ ₹2 ಲಕ್ಷ, ಎರಡನೇ ಚಾoಪಿಯನ್‌ಗೆ ₹1 ಲಕ್ಷ, ಮೂರನೇ ಚಾoಪಿಯನ್‌ಗೆ ₹50 ಸಾವಿರ ಸೇರಿದಂತೆ
10 ರಾಸುಗಳಿಗೆ ₹10 ಸಾವಿರ ರೂಪಾಯಿ ಸಮಾಧಾನಕರ ಬಹುಮಾನವನ್ನು ನೀಡುತ್ತಿದೆ. ಆದ್ದರಿಂದ ಈ ಬಾರಿಯ ದನಗಳ ಜಾತ್ರೆಯಲ್ಲಿ
ರಾಸುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ ದನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ರಾಸುಗಳ ಸುಂಕವನ್ನೂ ಟ್ರಸ್ಟ್ ವತಿಯಿಂದಲೇ ಭರಿಸಲಾಗುತ್ತಿದೆ.