ಮದ್ದೂರು: ಮೈಸೂರು –ಬೆಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಗರದ ಮರಿಯಪ್ಪ ಕಾನ್ವೆಂಟ್ ವಾಹನಕ್ಕೆ ಉದಯರಂಗ ಬಸ್ ಡಿಕ್ಕಿ ಹೊಡೆದು 7 ಮಕ್ಕಳು ಸೇರಿ 15 ಮಂದಿ ಗಾಯಗೊಂಡರು.

ವಿದ್ಯಾರ್ಥಿಗಳಾದ ಶಶಾಂಕ್ ಗೌಡ, ಹಿತಾ, ನಂದಿನಿ, ವಂದನಾ, ಮೋಹಿತ್, ಧ್ರುವ, ಸಾನ್ವಿಕಾ, ಶಾಲೆಯ ಬಸ್ ಚಾಲಕ ರಾಜಣ್ಣ ಹಾಗೂ ಉದಯರಂಗದಲ್ಲಿದ್ದ 8 ಮಂದಿ ಗಾಯಗೊಂಡವರು. ತಾಲ್ಲೂಕು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹುಳುಗನಹಳ್ಳಿಗೆ ಮಕ್ಕಳನ್ನು ಬಿಡಲು ಹೋಗುವಾಗ, ಸೋಮನಹಳ್ಳಿ ಬಳಿಯ ತಿಮ್ಮದಾಸ್ ಹೋಟೆಲ್ ಮುಂಭಾಗ ಅಪಘಾತ ನಡೆದಿದೆ. ಖಾಸಗಿ ಬಸ್ ಮದ್ದೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು.

ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶೋಭಾರಾಣಿ, ಬಿಇಒ ಧನಂಜಯ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಕೆ.ಎಂ.ರವಿ, ಶಾಲಾ ಆಡಳಿತ ಮಂಡಳಿಯ ಅಪೂರ್ವ ಚಂದ್ರು ನೀಡಿದ್ದರು.

ಮಳವಳ್ಳಿ ಡಿವೈಎಸ್ಪಿ ಯಶವಂತ್ ಕುಮಾರ್, ಇನ್ಸ್ಪೆಕ್ಟರ್ ನವೀನ್ ಕುಮಾರ್, ಪಿಎಸ್ಐ ಮಂಜುನಾಥ್, ರಾಮಸ್ವಾಮಿ, ಕಮಾಲಾಕ್ಷಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾಹನಗಳನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ದೂರು, ಕೊಳ್ಳೇಗಾಲ ರಸ್ತೆಯಲ್ಲಿ ಉದಯರಂಗ ಬಸ್ಗಳು ಅತಿವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸುವುದರಿಂದ ಅಪಘಾತಗಳು ನಡೆಯುತ್ತವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-40-1456810836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.