ಮಳವಳ್ಳಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈಚೆಗೆ ಯುನಿವರ್ಸಲ್ ಸೇವಾ ಟ್ರಸ್ಟ್ ಮತ್ತು ರಂಗಬಂಡಿ ಮಳವಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಸ್ತುತಪಡಿಸುವ ಉದ್ದೇಶದಿಂದ ಆಯೋಜಸಿದ್ದ ‘ವಿಶ್ವಗುರು ಬಸವಣ್ಣ-ಅಂಬೇಡ್ಕರ್ ನಾಟಕೋತ್ಸವ’ದಲ್ಲಿ ಬೆಂಗಳೂರಿನ ಅನಾವರಣ ರಂಗ ತಂಡದ ‘ವರ್ಣ ಪಲ್ಲಟ’ ನಾಟಕ ಪ್ರದರ್ಶನವು ಸಮಾಜದಲ್ಲಿರುವ ಅಸಮಾನತೆ, ಜಾತಿ ವ್ಯವಸ್ಥೆ, ಅಜ್ಞಾನ ಮತ್ತು ಅನ್ಯಾಯಗಳನ್ನು ಪ್ರಶ್ನಿಸುವ ಕಥಾವಸ್ತುವಿನಿಂದ ಕೂಡಿತ್ತು.

ವೃತ್ತಿರಂಗ ಟ್ರಸ್ಟ್ ನ ಯು.ಗೋವಿಂದೇಗೌಡ, ಗಣಪತಿ ಗೌಡ ಅವರ ವಿನ್ಯಾಸ ಮತ್ತು ನಿರ್ದೇಶನದ ‘ದುರ್ಯೋಧನ’ ಪ್ರದರ್ಶನಗೊಂಡಿತ್ತು. ಯುವ ಕಲಾವಿದರಿಗೆ ಪ್ರತಿಭೆ ಪ್ರದರ್ಶನದ ವೇದಿಕೆಯಾಗಿ, ಜನರಲ್ಲಿ ಚಿಂತನೆ ಮತ್ತು ಜಾಗೃತಿ ಮೂಡಿಸುವ ಕೆಲಸವಾಗಿತ್ತು. ಸಮಾನತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಿದ ವಿಶ್ವಗುರು ಬಸವಣ್ಣ-ಡಾ.ಬಿ.ಆರ್.ಅಂಬೇಡ್ಕರ್ ನಾಟಕೋತ್ಸವ ಸಾಮಾಜಿಕ ಬದಲಾವಣೆಯತ್ತ ಒಂದು ಸಶಕ್ತ ಹೆಜ್ಜೆಯಾಗಿತ್ತು.

ಯುನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ರಂಗಬಂಡಿ ಮಳವಳ್ಳಿಯ ಅಧ್ಯಕ್ಷ ಮಧು ಮಳವಳ್ಳಿ, ಶಿವರಾಜ್ ಚೆನ್ನಿಪುರ, ನಿರ್ದೇಶಕ ರವಿ ಟಿ.ಗಣಪತಿ ಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-1092521684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.