ಮಳವಳ್ಳಿ: ತಾಲ್ಲೂಕಿನ ಅಮೃತೇಶ್ವರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ 9 ಮಂದಿ ಜೆಡಿಎಸ್ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಯ 10 ನಿರ್ದೇಶಕ ಸ್ಥಾನಗಳಿಗೆ 2025ರ ಆಗಸ್ಟ್ ನಲ್ಲಿ ಚುನಾವಣೆ ನಡೆದಿತ್ತು. ಆದರೆ ಕೆಲವರು ಮತದಾನದ ಹಕ್ಕು ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಫಲಿತಾಂಶ ತಡೆಹಿಡಿಯಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈಚೆಗೆ ಫಲಿತಾಂಶ ಪ್ರಕಟಿಸುವಂತೆ ಆದೇಶ ನೀಡಲಾಗಿತ್ತು. ಹೀಗಾಗಿ ಬುಧವಾರ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ಜಿ.ರಾಮಕೃಷ್ಣ ಫಲಿತಾಂಶ ಘೊಷಿಸಿದರು.

ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಚಿಕ್ಕಸ್ವಾಮಿ, ದೊಡ್ಡೀರೇಗೌಡ(ಶಾಂತರಾಮ), ಶಿವಮಾದೇಗೌಡ, ದೊಡ್ಡೀರೇಗೌಡ, ರಾಮಕೃಷ್ಣ, ಟಿ.ಎಚ್.ಯಶೋಧ, ಲೀಲಾವತಮ್ಮ, ಅಂಕಶೆಟ್ಟಿ, ಶಿವಕುಮಾರ ಹಾಗೂ ಕಾಂಗ್ರೆಸ್ ಬೆಂಬಲಿತ ಕೆ.ನಾಗರಾಜು ಆಯ್ಕೆಯಾಗಿದ್ದಾರೆ. ಕೆಂಬೂತೆಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ತೇಜೇಂದ್ರ ಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಎಲ್ಲ ನಿರ್ದೇಶಕರು ಒಗ್ಗಟ್ಟಿನಿಂದ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.ಗ್ರಾ.ಪಂ.ಮಾಜಿ ಸದಸ್ಯ ಪುಟ್ಟರಾಜು, ಕೆಂಬೂತೆಗೆರೆ ಕೃಷಿ ಸಹಕಾರ ಸಂಘದ ನಿರ್ದೇಶಕ ಕಿರಣ್, ಜೆಡಿಎಸ್ ಮುಖಂಡರಾದ ಚಿಕ್ಕೀರಪ್ಪ, ದೊಡ್ಡತಮ್ಮಯ್ಯ, ಮಾದೇಗೌಡ, ಕೆಂಪೇಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-40-1493717284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.