ಮಳವಳ್ಳಿ: ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ನೀಡಿ ಉತ್ತಮ ಸಂದೇಶ ನೀಡಿರುವ ಭಗವಾನ್ ಬುದ್ಧ ಅವರ ಆದರ್ಶ ಪಾಲನೆಗೆ ಯುವ ಸಮೂಹ ಮುಂದಾಗಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಯುವ ಘಟಕ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ತಿಳಿಸಿದರು. ತಾಲ್ಲೂಕಿನ ಬಾಚನಹಳ್ಳಿ ಬಳಿಯ ಬೌದ್ಧ ವಿಹಾರದ ಆವರಣದಲ್ಲಿ ಶುಕ್ರವಾರ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ, ನವೋದಯ ಸೇವಾ ಟ್ರಸ್ಟ್ ಆಯೋಜಿಸಿದ್ಧ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯವನ್ನು ತಿಳಿಸಿಕೊಟ್ಟ ಬುದ್ಧನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಮುಖಂಡ ಮಹದೇವು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳ ಅಳವಡಿಸ ಬೇಕು ಎಂದು ಸಲಹೆ ನೀಡಿದರು. ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ನವೋದಯ ಸೇವಾ ಟ್ರಸ್ಟ್ ಮತ್ತು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಮಹನೀಯರ ಸಂದೇಶಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು. ಮನೋರಕ್ಷಿತ ಭಂತೇಜಿ ಮಾತನಾಡಿದರು. ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಯುವ ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜು, ನಿವೃತ್ತ ಉಪನ್ಯಾಸಕ ರಂಗಸ್ವಾಮಿ, ಸಾಹಿತಿ ಕೃಷ್ಣಯ್ಯ, ಮುಖಂಡರಾದ ಸೀಕ್ರೇಶ್, ಮಲ್ಲಿಕ್, ಮರಿಸ್ವಾಮಿ, ಸಂದೇಶ್ ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣ: ‘ಬೌದ್ಧ ಧರ್ಮಕ್ಕೆ ಸಮಾನತೆ ಮತ್ತು ನೈತಿಕತೆಯೇ ತಳಹದಿಯಾಗಿರುವುದರಿಂದ ಅಂಬೇಡ್ಕರ್ ಆ ಧರ್ಮವನ್ನು ಸ್ವೀಕರಿಸಿದರು’ ಎಂದು ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ ತಿಳಿಸಿದರು.

ಪಟ್ಟಣಲ್ಲಿ ಸಂಜಯ ಪ್ರಕಾಶನ ಶುಕ್ರವಾರ ಏರ್ಪಡಿಸಿದ್ದ ಬುದ್ಧ ಜಯಂತಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ‘ ಅಂಬೇಡ್ಕರ್ ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವ ಮುನ್ನ ಜರಡಿ ಹಿಡಿದು ಶುದ್ಧೀಕರಿಸಿ, ಅವರು ರೂಪಿಸಿದ ಮಾರ್ಗ ನವಯಾನ ಎಂದು ಪ್ರಸಿದ್ಧವಾಗಿದೆ. ಭಾರತೀಯ ಪರಂಪರೆಯ ಮೂಲಸೆಲೆಗಳನ್ನು ಹೊಂದಿದ್ದ ಬೌದ್ದ ಧರ್ಮವನ್ನು ಅವರು ಅಪ್ಪಿಕೊಂಡರು’ ಎಂದು ಹೇಳಿದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ ನೈತಿಕ ಮಾರ್ಗದಲ್ಲಿ ನಡೆಯದಿದ್ದರೆ ಬುದ್ದತ್ವ ಲಭಿಸಲಾರದು. ಬಾಹ್ಯ ಬಂಧನಗಳು ಇಲ್ಲದ ಕಾರಣ ಬುದ್ಧಧರ್ಮ ವ್ಯಾಪಿಸಲು ಸಾಧ್ಯವಾಯಿತು’ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಮಹದೇವ, ಮುಸ್ಲಿಂ ಸೌಹಾರ್ದ ವೇದಿಕೆ ಗೌರವಾಧ್ಯಕ್ಷ ಇಲ್ಯಾಸ್ ಅಹಮದ್ ಖಾನ್, ಕ್ಯಾತನಹಳ್ಳಿ ಚಂದ್ರಣ್ಣ, ವಕೀಲರಾದ ಎಸ್.ಆರ್. ಸಿದ್ದೇಶ್, ಸಿ.ಎಸ್. ವೆಂಕಟೇಶ್, ಟಿ. ಬಾಲರಾಜು, ಪ್ರಕಾಶಕ ಎಸ್.ಎಂ. ಶಿವಕುಮಾರ್, ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಜಾಂ ರವಿಚಂದ್ರ, ಧನಂಜಯ ಬ್ಯಾಡರಹಳ್ಳಿ, ನಂಜುಂಡ ಮೌರ್ಯ, ಚಿಕ್ಕತಮ್ಮೇಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-437814380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.