ಮಳವಳ್ಳಿ: ‘ಮನುಷ್ಯರು ಪ್ರಸ್ತುತ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾನೂನು ರೂಪಿಸುತ್ತಿರುವ ಸಚಿವಾಲಯಗಳೇ ಕಾರಣವಾಗಿವೆ’ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.

ತಾಲ್ಲೂಕಿನ ಬುಗತಗಹಳ್ಳಿಯಲ್ಲಿ ಮದನ್ ಮೋಹನ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಿಪಿಐ(ಎಂ) ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಹುಟ್ಟಿನಿಂದ ಸಾಯುವವರೆಗಿನ ಬವಣೆ, ಸಂಕಟಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕು. ಅದಕ್ಕಾಗಿ ಜನರು ವೈಜ್ಞಾನಿಕವಾಗಿ ಯೋಚಿಸಬೇಕು. ಮನುಷ್ಯರ ಕಷ್ಟಗಳಿಗೆ ಪರಿಹಾರ ದೇವಾಲಯದಲ್ಲಿ ಸಿಗುವುದಿಲ್ಲ, ನಾವು ಪಾದಯಾತ್ರೆ ಹೋಗಬೇಕಾಗಿರುವುದು ದೇವಾಲಯಕ್ಕೆ ಅಲ್ಲ ಬದಲಾಗಿ ಸಚಿವಾಲಯಕ್ಕೆ’ ಎಂದು ಹೇಳಿದರು.

‘ದುಡಿಯುವ ವರ್ಗದ ಶ್ರಮಕ್ಕೆ ತಕ್ಕಂತೆ ಬೆಲೆ ಅಂದರೆ ಕೂಲಿ ನೀಡದೆ ಆಳುವ ವರ್ಗ ಇವರ ಬಡತನಕ್ಕೆ ದೇವರು ಕಾರಣ ಎಂದು ನಂಬಿಸಿದ್ದಾರೆ. ಆದ್ದರಿಂದ ಇಂತಹ ಮೂಡ ನಂಬಿಕೆಗಳ ವಿರುದ್ಧ ಹೋರಾಡಲು ಇಂತಹ ಶಿಬಿರ ಸಹಾಯಕವಾಗಿದೆ ’ ಎಂದರು.

ರಾಜ್ಯ ಮುಖಂಡ ಎನ್.ಕೆ.ವಸಂತರಾಜ್, ‘ಅಧ್ಯಯನ ಶಿಬಿರಗಳ ಮೂಲಕ ಹೋರಾಟದ ರೂಪುರೇಷೆಗಳನ್ನು ರಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ನಮ್ಮನ್ನು ಆಳುವ ವರ್ಗವನ್ನು ಎಚ್ಚರಿಸುವ ಕೆಲಸ ಹೋರಾಟದಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಮುಖಂಡ ವಿಜಯ್ ಕುಮಾರ್, ಜಿಲ್ಲಾ ಮುಖಂಡರಾದ ಎನ್.ಎಲ್.ಭರತ್ರಾಜ್, ಸಿ.ಕುಮಾರಿ, ಬಿ.ಹನುಮೇಶ ಮತ್ತು ಎನ್.ಲಿಂಗರಾಜಮೂರ್ತಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-40-127849221

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.