ಮಳವಳ್ಳಿ: ‘ಇಡೀ ಜಿಲ್ಲೆಯಲ್ಲಿ ಕೈಗಾರಿಕಾ ವಲಯವಿಲ್ಲದ ತಾಲ್ಲೂಕು ಮಳವಳ್ಳಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಾನಾ ಮೂಲಗಳಿಂದ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸೋಮವಾರ ಸಿಎಸ್ಆರ್ ಅನುದಾನದಡಿ ₹3.28 ಕೋಟಿ ವೆಚ್ಚದ ನಾಲ್ಕು ಪೊಲೀಸ್ ವಾಹನಗಳಿಗೆ ಚಾಲನೆ ನೀಡಿ, ಸಂಚಾರ ಸುರಕ್ಷತೆಗಾಗಿ ಅಳವಡಿಸಿರುವ ಪೊಲೀಸ್ ಚೌಕಿ ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿಟಿವಿ ಕ್ಯಾಮೆರಾಗಳು, ಸಿಸಿಟಿವಿ ಕಮಾಂಡ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳೆಯ ವಾಹನಗಳ ಬಳಕೆಯಿಂದ ಆಗುವ ಸಮಸ್ಯೆ ಅರಿತು ಸನ್ಸೆರಾ ಫೌಂಡೇಶನ್ ವತಿಯಿಂದ 4 ಮಹೀಂದ್ರಾ ಕಂಪನಿಯ ಜೀಪುಗಳನ್ನು ನೀಡಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಸನ್ಸೆರಾ ಫೌಂಡೇಷನ್ ವತಿಯಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ ಪ್ರತಿ ಕ್ಲಸ್ಟರ್ ಗೆ ಒಬ್ಬ ಪರಿಣಿತ ಆಂಗ್ಲ ಶಿಕ್ಷಕರನ್ನು 10 ತಿಂಗಳ ಅವಧಿಗೆ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ‘ಯಾವುದೇ ಘಟನೆ ನಡೆದಾಗ ಮತ್ತು ನಂತರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಬಹಳ ಸಹಾಯಕಾರಿಯಾಗಲಿದೆ. ನಮ್ಮ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿದೆ’ ಎಂದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಇಂಥ ಸಾರ್ವಜನಿಕ ಉಪಯೋಗ ಕೆಲಸಕ್ಕೆ ತಮ್ಮದೇ ಶ್ರೇಷ್ಠತೆ ಮತ್ತು ದೂರದೃಷ್ಟಿ ಚಿಂತನೆ ಬೇಕು. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ರಾಜ್ಯದಲ್ಲಿ ಮಾದರಿಯಾಗಿದೆ’ ಎಂದು ಹೇಳಿದರು.

ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಸನ್ಸೆರಾ ಫೌಂಡೇಶನ್ ನ ಮನೋಹರ್, ವಸಂತ್ ಭಾರದ್ವಾಜ್, ಗಿರೀಶ್ ರಾವ್, ಇತರೆ ಕಂಪನಿಗಳ ಸೂರ್ಯನಾರಾಯಣ, ಬಾಬು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-40-806136623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.