ಮಳವಳ್ಳಿ: ಪಟ್ಟಣದ ರಾಮಾರೂಢಸ್ವಾಮಿ ಮಠದಲ್ಲಿ ಜೂ.16ರಿಂದ 25ರವರೆಗೆ ನಡೆಯುವ ಗಂಗಾ ಜಯಂತಿ ನಿಮಿತ್ತ ಮಳವಳ್ಳಿಯ ಮುಖಂಡರು ಬಾಗಲಕೋಟೆಯ ರಾಮಾರೂಢಸ್ವಾಮಿ ಮಠದ ಪರಮರಾಮಾರೂಢ ಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದರು.

ಮಠಕ್ಕೆ ತೆರಳಿದ ಮಳವಳ್ಳಿಯ ಗಂಗಾಪರಮೇಶ್ವರಿ ದೊಡ್ಡಗಡಿಕುಲದ ಯಜಮಾನರು ಹಾಗೂ ಮುಖಂಡರು ಸ್ವಾಮೀಜಿ ಅವರನ್ನು ಭೇಟಿ ಮಾಡಿ 10 ದಿವಸ ನಡೆಯುವ ಗಂಗಾ ಜಯಂತಿ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಲಹೆ –ಸೂಚನೆಗಳನ್ನು ನೀಡುವುದರ ಜೊತೆಗೆ ಸಾನ್ನಿಧ್ಯವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದರು.

ಯಜಮಾನರು ಹಾಗೂ ಮುಖಂಡರ ಮನವಿಗೆ ಸ್ಪಂದಿಸಿದ ಪರಮರಾಮಾರೂಢ ಸ್ವಾಮೀಜಿ ಅವರು ಕಾರ್ಯಕ್ರಮದ ಆಗಮಿಸುವುದಾಗಿ ಭರವಸೆ ನೀಡಿ ಮಹೋತ್ಸವಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಒಂದೊಂದು ದಿವಸ ಗಂಗಾಮತಸ್ಥ ಜನಾಂಗದವರು ಒಂದೊಂದು ಗಂಗೆಯನ್ನು ಮೆರವಣಿಗೆ ಮೂಲಕ ತಂದು ದಶಗಂಗೆಯನ್ನು ಪೂಜಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲ ವರ್ಷಗಳಿಂದ ನಿಲ್ಲಿಸಿದ್ದ ಆಚರಣೆಯನ್ನು ಈ ವರ್ಷ ಮತ್ತೆ ಆರಂಭಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-1076067367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.