ಮಳವಳ್ಳಿ: ಜನರಿಗೆ ಗುಣಮಟ್ಟದ ಹಾಲು ಹಾಗೂ ಉಪ ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ಮನ್ ಮುಲ್ ಸಂಸ್ಥೆ ವಿಶ್ವಾಸ ಗಳಿಸಿದೆ ಎಂದು ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ವಿಶ್ವ ಹಾಲು ದಿನದ ಅಂಗವಾಗಿ ಮನ್ ಮುಲ್ ತಾಲ್ಲೂಕು ಉಪಶಾಖೆ ವತಿಯಿಂದ ಒಳರೋಗಿಗಳಿಗೆ ನಂದಿನಿ ಹಾಲು ಹಾಗೂ ಉಪ ಉತ್ಪನ್ನಗಳನ್ನು ವಿತರಿಸಿ ಅವರು ಮಾತನಾಡಿದರು.

‘ನಂದಿನಿ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠತೆ ಹೊಂದಿದೆ. ರಾಜ್ಯಕ್ಕೆ ಮಾತ್ರ ಸೀಮಿತಗೊಳ್ಳದೇ ರಾಷ್ಟ್ರಮಟ್ಟದಲ್ಲಿಯೂ ನಮ್ಮ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ. ರೈತರ ಶ್ರಮದ ಫಲವಾಗಿ ದೇಶದ ಎಲ್ಲ ರಾಜ್ಯಗಳಿಗೂ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದರು.

‘ವಿಶ್ವ ಹಾಲು ದಿನವನ್ನು ಮನ್ ಮುಲ್ ವತಿಯಿಂದ ಹೊಸದಾಗಿ ಪರಿಚಯಿಸುತ್ತಿರುವ ಗುಡ್ ಲೈಫ್ ಹಾಲು ಹಾಗೂ ಉಪ ಉತ್ಪನ್ನಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ ರೋಗಿಗಳಿಗೆ ನೀಡುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದೆ. ಮನ್ಮುಲ್ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಗ್ರಾಹಕರು ಮತ್ತು ಉತ್ಪಾದಕರ ನಡುವಿನ ಬಾಂಧವ್ಯದಿಂದ ಜನರ ವಿಶ್ವಾಸ ಪಡೆದಿದೆ’ ಎಂದು ಹೇಳಿದರು.

ಮನ್ ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ಮಾತನಾಡಿ, ‘ನಂದಿನಿ ಹಾಲು ಮತ್ತು ಉಪ ಉತ್ಪನ್ನಗಳು ಎಲ್ಲ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಬೇಡಿಕೆ ಹೆಚ್ಚಾಗುತ್ತಿದೆ. ವ್ಯವಸಾಯದ ಜೊತೆಗೆ ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಪದವಿ ಪಡೆದ ಯುವಕರು ಸಹ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಸದೃಢತೆ ಸಾಧಿಸುತ್ತಿದ್ದಾರೆ’ ಎಂದು ಹೇಳಿದರು.

ಮನ್ ಮುಲ್ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕಾಂತ್, ಸಹಾಯಕ ವ್ಯವಸ್ಥಾಪಕ ಸಾಗರ್, ಮನ್ ಮುಲ್ ತಾಲ್ಲೂಕು ವ್ಯವಸ್ಥಾಪಕ ನೂತನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ಮನ್ ಮುಲ್ ಅಧಿಕಾರಿ, ಸಿಬ್ಬಂದಿ, ವೈದ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-40-1819724278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.