ಮಳವಳ್ಳಿ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾ.26 ಮತ್ತು 27ರಂದು ವಸಂತೋತ್ಸವ, ರಂಗ ಗೌರವ, ವಿಚಾರ ಸಂಕಿರಣ, ನಾಟಕಗಳ ಪ್ರದರ್ಶನ ನಡೆಯಲಿದೆ.

ಕರ್ನಾಟಕ ನಾಟಕ ಅಕಾಡೆಮಿ, ರಂಗಬಂಡಿ ಮಳವಳ್ಳಿ, ಯುನಿವರ್ಸಲ್ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿರುವ ಕಾರ್ಯಕ್ರಮವನ್ನು 26ರಂದು ಸಂಜೆ 6.30ಕ್ಕೆ ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಉದ್ಘಾಟಿಸಲಿದ್ದು, ಯುನಿವರ್ಸಲ್ ಸೇವಾ ಟ್ರಸ್ಟ್ನ ಟಿ.ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಂಕರೇಗೌಡ, ವಿ.ಎಂ.ವಿಶ್ವನಾಥ್, ಪುಟ್ಟಸ್ವಾಮಿಗೌಡ, ಎಂ.ಪಿ.ಮಧು ಹಾಗೂ ಹಲವು ಮುಖಂಡರು ಭಾಗಿಯಾಲಿದ್ದಾರೆ.

26ರಂದು ಕರಾವಳಿ ನಿರ್ದಿಗಂತ ಪ್ರಸ್ತುತ ಪಡಿಸುವ ಲೋಹಿಯಾರವರ ಲೇಖನಗಳ ಆಧಾರಿತ ‘ರಾಮ ಕೃಷ್ಣ ಶಿವ’ ನಾಟಕ ಪ್ರದರ್ಶನಗೊಳ್ಳಲಿದ್ದು, 27ರಂದು ಹಿರಿಯ ರಂಗಕರ್ಮಿ ಪ್ರೊ.ಜಯಪ್ರಕಾಶ್ ಗೌಡ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎ.ಎಸ್.ಚಂದ್ರಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಯುನಿವರ್ಸಲ್ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಮಹೇಶ್, ಚ ನಾರಾಯಣಸ್ವಾಮಿ, ಸಿ.ಪಿ.ರಾಜು, ಶಶಿರಾಜು, ಎಂ.ಲಿಂಗರಾಜು ಹಾಗೂ ಮುಖಂಡರು ಭಾಗಿಯಾಗಲಿದ್ದಾರೆ.

ಚೌಡೇಶ್ ವಡ್ಡರಹಳ್ಳಿ, ಜಯರಾಜು ಪೂರಿಗಾಲಿ, ಎ.ಎಸ್.ದೇವರಾಜು, ತಳಗವಾದಿ ವೆಂಕಟೇಶ್, ಸಿ.ನಾಗರಾಜು, ಬುಲೆಟ್ ನಿಂಗಣ್ಣ, ಚ.ನಾರಾಯಣ ಸ್ವಾಮಿ, ಮಹದೇವಮ್ಮ, ಎಂ.ಎಲ್.ಮಧುಕರ್, ಎಂ.ಲಿಂಗರಾಜು, ಕೆ.ಶ್ರೀನಿವಾಸ್, ಸಿ.ನಂಜುಂಡಸ್ವಾಮಿ ಅವರಿಗೆ ರಂಗ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಬಂಡಿ ಮಳವಳ್ಳಿಯ ಮಧು ಮಳವಳ್ಳಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-40-771490876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.