ಕಿಕ್ಕೇರಿ: ಪ್ರತಿ ವರ್ಷ ಬೇಸಿಗೆ ಬಂತೆಂದರೆ ಪ್ರಾಣಿ ಪಕ್ಷಿಗಳಿಗೆ ಜೀವಗುಟುಕಾದ ಕೆರೆ ಮತ್ತು ಹಳ್ಳ– ಕೊಳ್ಳದ ನೀರನ್ನು ಕೆಲವರು ಅಕ್ರಮವಾಗಿ ಬಸಿಯುತ್ತಿದ್ದಾರೆ. ಇದರಿಂದ ಜಲಮೂಲಗಳು ಒಣಗುತ್ತಿವೆ ಎಂಬುದು ಪರಿಸರ ಪ್ರೇಮಿಗಳ ದೂರು.

ಬೇಸಿಗೆಯ ತಾಪಮಾನಕ್ಕೆ ಬಾಯಾರಿಕೆ ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಕೆರೆ ಕಟ್ಟೆಗಳ ನೀರನ್ನು ಅವಲಂಬಿಸಿವೆ. ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಕೆರೆ ಸುಮಾರು 25 ಎಕರೆ ವಿಸ್ತಾರವನ್ನು ಹೊಂದಿದೆ. ಕಾಟಾಚಾರಕ್ಕೆ ಹೂಳು ತೆಗೆದಿರುವುದರಿಂದ ಅಲ್ಪ ಸ್ವಲ್ಪವಾದರೂ ಹಳ್ಳಕೊಳ್ಳದಲ್ಲಿ ನೀರು ಸಂಗ್ರಹವಿದೆ.

ಗಂಗೇನಹಳ್ಳಿ ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ ಇಲ್ಲಿನ ಸುತ್ತಮುತ್ತಲ ರೈತರ ಬದುಕು ಹಸನು ಕಾಣಬಹುದಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸದಿದ್ದರೆ ಬೇಸಿಗೆ ಮುಗಿಯುವುದರೊಳಗೆ ಸಂಪೂರ್ಣ ಕೆರೆ ಬರಿದಾಗುವ ಜೊತೆಗೆ ಪ್ರಾಣಿ ಪಕ್ಷಿಗಳಿಗೂ ಸಂಕಷ್ಟ ಎದುರಾಗಲಿದೆ.

ಬೇಸಿಗೆಯಲ್ಲಿ ಕೆರೆಯಲ್ಲಿನ ನೀರನ್ನು ಮೋಟಾರು ಪಂಪು ಬಳಸಿ ಬಸಿಯುವ ಕ್ರಿಯೆ ಆರಂಭವಾಗಿದೆ. ಈ ಅಕ್ರಮ ಚಟುವಟಿಕೆ ವರ್ಷಪೂರ್ತಿ ಕೆರೆದಂಡೆಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಕೆರೆ–ನಾಲೆಗಳ ನೀರನ್ನು ಅಕ್ರಮವಾಗಿ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಈಚೆಗೆ ಆದೇಶವನ್ನೂ ಹೊರಡಿಸಿದೆ.

‘ಪ್ರಭಾವಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿ ಯುತ್ತಾರೆ. ನಾಮಕಾವಸ್ಥೆಗೆ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಅಧಿಕಾರಿಗಳು ಮೋಟಾರ್ ಪಂಪು ವಶಪಡಿಸಿಕೊಳ್ಳುತ್ತಾರೆ’ ಎಂದು ರೈತ ಮಹಿಳೆ ಜಯಮ್ಮ ಮತ್ತು ಗ್ರಾಮಸ್ಥರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-40-2029055915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.