ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯನ್ನು ನವೀಕರಿಸಲಾಗಿದ್ದು, ಬೃಹತ್ ಗುರು ಭೈರವೈಕ್ಯ ಮಂದಿರವು ಏಪ್ರಿಲ್ 15ರಂದು ಲೋಕಾರ್ಪಣೆಗೊಳ್ಳಲಿದೆ.

ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಕಾಲಭೈರವೇಶ್ವರಸ್ವಾಮಿ ದೇಗುಲದ ಪಕ್ಕದಲ್ಲಿಯೇ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಮಾಧಿ ಮಾಡಲಾಗಿತ್ತು. ಶ್ರೀಗಳ ನಿಧನದ ಸಂದರ್ಭದಲ್ಲಿ ಗದ್ದುಗೆಗೆ ತಾತ್ಕಾಲಿಕವಾಗಿ ಮಂಟಪ ನಿರ್ಮಿಸಲಾಗಿತ್ತು. ನಂತರ ಮೂಲ ಸಮಾಧಿಯ ಗದ್ದುಗೆಯನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಂಡು ಮಂಟಪವನ್ನು ಮಾತ್ರ ತೆರವುಗೊಳಿಸಿ, ಎರಡು ಅಂತಸ್ತುಗಳಲ್ಲಿ ಮಂದಿರವನ್ನು ನಿರ್ಮಿಸಲು ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಂದಾಗಿದ್ದು, ಮಂಟಪವನ್ನು ಸಂಪೂರ್ಣವಾಗಿ ಕೆಂಪು ಶಿಲೆ ಹಾಗೂ ವಿವಿಧ ಬಗೆಯ ಶಿಲೆಗಳಿಂದಲೇ ನಿರ್ಮಿಸಲಾಗಿದೆ.

ಮಂಟಪದ ನೆಲಮಹಡಿಯಲ್ಲಿ ಗುರು ಗದ್ದುಗೆಯಿದೆ. ಗದ್ದುಗೆಯ ಸುತ್ತ ಪ್ರದಕ್ಷಿಣಾ ಸ್ಥಳವಿರಲಿದೆ. ನೆಲಮಹಡಿಯ ಮೇಲಿನ ಅಂತಸ್ತಿನಲ್ಲಿ ಸ್ವಾಮೀಜಿ ಪುತ್ಥಳಿಯಿರುವ ಭವ್ಯ ಮಂಟಪವಿದೆ. ಕಾಲಭೈರವೇಶ್ವರಸ್ವಾಮಿ ದೇವಾಲಯದ ಪಶ್ಚಿಮ ಬಾಗಿಲಿಗೆ ಮಂಟಪದ ಮುಖ್ಯ ದ್ವಾರವಿದ್ದು, ಅತ್ಯಾಧುನಿಕ ಶೈಲಿಯಲ್ಲಿ ನಾಥ ಪರಂಪರೆಯನ್ನು ಸಾರುವ ಶಿಲ್ಪಕಲೆಯೊಂದಿಗೆ ಮಂಟಪ ನಿರ್ಮಿಸಲಾಗಿದೆ.

ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾಧಿಕಾರಿ ಕುಮಾರ್ ಹಾಗೂ ಎಸ್ಪಿ ಶೋಭಾರಾಣಿ ಇತ್ತೀಚೆಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಕಾರ್ಯಕ್ರಮ ಕುರಿತು ಮಾಹಿತಿ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-4-1095497916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.