ಮಂಡ್ಯ: ಅಕ್ಷಯ ತೃತೀಯ ಅಂಗವಾಗಿ ಚಿನ್ನಾಭರಣ ಖರೀದಿಸಲು ಗ್ರಾಹಕರು ಮುಗಿಬಿದ್ದರು. ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಸೋಮವಾರ ಜನರು ಕಿಕ್ಕಿರಿದು ತುಂಬಿದ್ದರು.

ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಖರೀದಿಸಿದರೆ ಸಂಪತ್ತು ದುಪ್ಪಟ್ಟಾಗುತ್ತದೆ ಎಂಬ ನಂಬಿಕೆಯಿಂದ ನಗರದ ಪೇಟೆಬೀದಿ, ವಿ.ವಿ.ರಸ್ತೆ, ನೂರಡಿ ರಸ್ತೆ, ಬೆಂಗಳೂರು–ಮೈಸೂರು ಹಳೇ ಹೆದ್ದಾರಿಯಲ್ಲಿರುವ ಚಿನ್ನಾಭರಣ ಮಾರಾಟ ಮಳಿಗೆಗಳಲ್ಲಿ ಭರಾಟೆ ಜೋರಾಗಿತ್ತು.

ಬಸವ ಜಯಂತಿ ಪ್ರಯುಕ್ತ ರಜೆಯಿತ್ತು. ಹೀಗಾಗಿ ಚಿನ್ನಾಭರಣ ಖರೀದಿಸಲು ಹೆಚ್ಚಿನ ಸಂಖ್ಯೆಯ ಜನರು ಜ್ಯುವೆಲರಿ ಶಾಪ್ಗಳಿಗೆ ಬಂದಿದ್ದರು. ಮಹಿಳೆಯರು ಆಭರಣ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.

ಮಂಡ್ಯ ನಗರವೊಂದರಲ್ಲೇ 120ಕ್ಕೂ ಹೆಚ್ಚು ಚಿನ್ನದ ಅಂಗಡಿಗಳಿದ್ದು, ಮಂಡ್ಯ ಜ್ಯುವೆಲರ್ಸ್ ಅಸೋಸಿಯೇಷನ್ನಲ್ಲಿ 75ಕ್ಕೂ ಹೆಚ್ಚು ಚಿನ್ನದ ಅಂಗಡಿಗಳ ಮಾಲೀಕರು ಸದಸ್ಯರಾಗಿದ್ದಾರೆ. ಇವರಲ್ಲಿ ಬಹುತೇಕ ವರ್ತಕರು ಬಾಂಬೆ, ಬೆಂಗಳೂರಿನಿಂದದ ಚಿನ್ನದ ಬಿಸ್ಕತ್, ಗಟ್ಟಿಗಳನ್ನು ಖರೀದಿಸಿ ತಂದು ಸ್ಥಳೀಯವಾಗಿ ಆಭರಣಗಳ ರೂಪದಲ್ಲಿ ಮಾರಾಟ ಮಾಡುತ್ತಾರೆ.

‘ಚಿನ್ನ, ಬೆಳ್ಳಿ ಬೆಲೆ ಇಳಿಕೆಯಿಂದಾಗಿ ಖರೀದಿಸುವವರ ಸಂಖ್ಯೆ ಈ ವರ್ಷ ಹೆಚ್ಚಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಶೇ 25ರಷ್ಟು ಹೆಚ್ಚುವರಿ ವ್ಯಾಪಾರವಾಗಿದೆ. ನಮ್ಮ ಮಳಿಗೆಯಲ್ಲಿ ಸಂಜೆವರೆಗೆ ಸುಮಾರು ₹2.50 ಕೋಟಿ ವ್ಯವಹಾರ ನಡೆದಿದೆ’ ಎಂದು ಮಂಡ್ಯ ನಗರದ ‘ಶ್ರೀನಿಧಿ ಗೋಲ್ಡ್’ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥಶೆಟ್ಟಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-40-865238755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.