ಭಾರತೀನಗರ: ಅಂಬರೀಷ್ ಅವರು ಜನಸೇವೆಯನ್ನು ತಮ್ಮ ಕರ್ತವ್ಯವೆಂದು ಭಾವಿಸಿದ್ದರು. ಅವರ ಜನಸೇವಾ ಕಾರ್ಯಗಳನ್ನು ನಿರಂತರ ಮುಂದುವರಿಸಿಕೊಂಡು ಹೋಗುವುದಾಗಿ ಸುಮಲತಾ ಅಂಬರೀಷ್ ಹೇಳಿದರು.

ಅಂಬರೀಷ್ ಅಭಿಮಾನಿಗಳ ಸಂಘದ ಕಚೇರಿ ಬಳಿ ಡಾ.ಎಂ.ಎಚ್.ಅಂಬರೀಷ್ ಫೌಂಡೇಶನ್, ಅಂಬರೀಷ್ ಅಭಿಮಾನಿಗಳ ತಾಲ್ಲೂಕು ಒಕ್ಕೂಟ, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ‘ರೆಬಲ್ ಸ್ಟಾರ್’ ಅಂಬರೀಷ್ ಅವರ 74ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂಬರೀಷ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಾನು ಮದ್ದೂರು ತಾಲ್ಲೂಕಿಗೆ ಬಂದಾಗ, ಯಾವುದೇ ರಾಜಕಾರಣಿಯಾಗಿ ಬರುವುದಿಲ್ಲ. ತಾಲ್ಲೂಕಿನ ಸೊಸೆಯಾಗಿ ಬರುತ್ತೇನೆ. ಅಂಬರೀಷ್ ಅವರ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿದ್ದು ಅದರಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ, ಪರೀಕ್ಷೆಗಳಲ್ಲಿ ಸಾಧಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ಮುಂದುವರೆಸಿದ್ದೇವೆ’ ಎಂದು ಹೇಳಿದರು.

ಅಂಬರೀಷ್ ಪುತ್ರ ಅಭಿಷೇಕ್ ಮಾತನಾಡಿ, ತಂದೆಯವರ ಆಶಯದಂತೆ ಜನಸೇವೆಯನ್ನೇ ಪರಮ ಗುರಿಯಾಗಿಸಿಕೊಂಡು ತಮ್ಮ ಕುಟುಂಬವು ಕೈಲಾದಷ್ಟು ಮಟ್ಟಿಗೆ ಜನರಿಗೆ ನೆರವು ನೀಡಲು ಯೋಚಿಸಿದ್ದು, ಅಂಬರೀಷ್ ಅವರ ಆತ್ಮಕ್ಕೆ ತೃಪ್ತಿ ತರುವಂತೆ ಜನರಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಹಾಗೂ ಸಂಬಂಧಿ ಮಧನ್ ದೊಡ್ಡರಸಿನಕೆರೆ ಗ್ರಾಮಕ್ಕೆ ತೆರಳಿ ಅಂಬರೀಷ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಾಂಡವಪುರ ತಾಲ್ಲೂಕಿನ ಪುಸ್ತಕದ ಮನೆಯ ಎನ್.ಅಂಕೇಗೌಡ, ಹೊಳಲು ಗ್ರಾಮದ ಕೀಲು, ಮೂಳೆ ತಜ್ಞ ಡಾ.ಎಚ್.ಎಸ್.ರವಿಕುಮಾರ್, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಅವರಿಗೆ ತಲಾ ₹ 25 ಸಾವಿರ ನಗದು ಒಳಗೊಂಡ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ, ಶಾಲು ಹೊದಿಸಿ, ಹಾರ ಹಾಕಿ, ಅಂಬರೀಷ್ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಗಮಂಗಲ ತಾಲ್ಲೂಕಿನ ಕರಡಹಳ್ಳಿ ಗ್ರಾಮದ ಆರ್.ಧನಂಜಯ, ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶ್ರೀಲಕ್ಷ್ಮಿ, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯ ಎಸ್ಟಿಜಿ ಪಿಯು ಕಾಲೇಜಿನ ಟಿ.ಎಸ್.ಸಹನಾ, ರಾಜ್ಯಕ್ಕೆ 7ನೇ ಸ್ಥಾನ ಪಡೆದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಕೆ.ವೈ.ಸಂಜನಾ, ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪಿಇಎಸ್ ಪಿಯು ಕಾಲೇಜಿನ ಎಚ್.ಬಿ.ತೇಜಸ್ವಿನಿ, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕಾರ್ಮೆಲ್ ಬಾಲಕಿಯರ ಪಿಯು ಕಾಲೇಜಿನ ಫೈಜಾ ಅಲಿ ಸೈಯದ್ ಅವರಿಗೆ ತಲಾ ₹10 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ, ಶಾಲು, ಪೇಟಾ, ಹಾರ ಹಾಕಿ ಅಭಿನಂದಿಸಲಾಯಿತು.

ಮಳವಳ್ಳಿ ತಾಲ್ಲೂಕು ಟಿಎಚ್ಒ ಡಾ.ವೀರಭದ್ರಪ್ಪ, ವೈದ್ಯರಾದ ಡಾ. ನಾಗರಾಜು ಅವರನ್ನು ಸನ್ಮಾನಿಸಲಾಯಿತು.

ಅಂಬರೀಷ್ ಸಂಬಂಧಿ ಮಧನ್, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಅಂಬರೀಷ್ ಅಭಿಮಾನಿಗಳ ಮದ್ದೂರು ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಮುಟ್ಟನಹಳ್ಳಿ ಮಹೇಂದ್ರ, ಜಿ.ಪಂ ಮಾಜಿ ಸದಸ್ಯ ಬಿ.ವಿವೇಕಾನಂದ, ಮುಖಂಡರಾದ ಹನಕೆರೆ ಶಶಿಕುಮಾರ್, ತೊರೆಚಾಕನಹಳ್ಳಿ ಶಂಕರೇಗೌಡ, ತೈಲೂರು ಸಿದ್ದರಾಜು, ಹಾಗಲಹಳ್ಳಿ ಎಂ.ಬಸವರಾಜು, ಕ್ಯಾತಘಟ್ಟ ನಾಡಗೌಡ ಮರಿಸ್ವಾಮಿ, ಪಿಡಿಒ ಎನ್.ಸುಧಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-40-2135225792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.