ಮಂಡ್ಯ: ‘ಪಶು– ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುವುದರಿಂದ, ಎಲ್ಲರೂ ಮನೆ ಚಾವಣಿ ಮತ್ತು ಮುಂಭಾಗ ನೀರು, ಆಹಾರ ಇರಿಸುವ ಮೂಲಕ ಮೂಕಜೀವಿಗಳ ಜೀವ ಉಳಿಸಿ’ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್. ನಾರಾಯಣ್ ಮನವಿ ಮಾಡಿದರು.

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಜೈ ಕರ್ನಾಟಕ ಪರಿಷತ್ ವತಿಯಿಂದ ‘ಪರಿಸರ ಉಳಿಸಿ’ ಅಭಿಯಾನ ಮತ್ತು ಪ್ರಾಣಿ ಪಕ್ಷಿಗಳಿಗೆ ‘ನೀರಿನ ತೊಟ್ಟಿ’ ಅಳವಡಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ನಡುವೆ ಇರುವ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ತಕ್ಷಣ ಸಿಗುವಂತೆ ನೋಡಿಕೊಳ್ಳಬೇಕು. ನಮ್ಮ ಸಂಘಟನೆಯೊಂದಿಗೆ ಹಲವು ಸಂಘ ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ನಗರದಾದ್ಯಂತ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

‘ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್’ನ ವಿನಯ್ ಕುಮಾರ್ ಮಾತನಾಡಿ, ಜೈ ಕರ್ನಾಟಕ ಪರಿಷತ್ನವರು ಉತ್ತಮ ಕೆಲಸ ಮಾಡುತ್ತಿದ್ದು, ಈ ಸೇವಾ ಕಾರ್ಯಕ್ಕೆ ಎಲ್ಲರೂ ಜೊತೆಯಾಗಿರೋಣ ಎಂದು ತಿಳಿಸಿದರು.

ನುಡಿಭಾರತಿ ಸಹಕಾರ ಸಂಘದ ಎ.ಎಲ್. ಬಸವೇಗೌಡ, ಮುಖಂಡರಾದ ಎಂ.ಜೆ. ಯೋಗೇಶ್, ಶಿವಕುಮಾರ್, ಕಿರಣ್ ಕುಮಾರ್, ಭಾರತಿ, ಪುಟ್ಟಮ್ಮ, ರೇಖಾ, ನಾಗಮ್ಮ, ವರಲಕ್ಷ್ಮಿ, ಸಂಘಟನೆಯ ಜೆ.ಬಸವರಾಜ್, ಪುಟ್ಟಸ್ವಾಮಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-40-112080293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.