ಮಂಡ್ಯ: ಇಲ್ಲಿನ ಅಶೋಕ ನಗರ ಸೇರಿದಂತೆ ವಿವಿಧೆಡೆ ಇರುವ ಮರಗಳನ್ನು ಹನನ ಮಾಡಲು ಹೊರಟಿರುವ ನಡೆಯನ್ನು ಪರಿಸರ ಪ್ರೇಮಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಅರಣ್ಯ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಗರದೆಲ್ಲೆಡೆ ಅಪಾಯ ಉಂಟು ಮಾಡುವ ಮರಗಳ ಕೊಂಬೆಗಳನ್ನು ಮಾತ್ರ ಕಟಾವು ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಮರಗಳನ್ನು ದಪ್ಪ ಕೊಂಬೆಗಳನ್ನು ಕಟಾವು ಮಾಡಿ ಅವು ಮತ್ತೆ ಚಿಗುರದಂತೆ ನಾಶ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ ರೋಪಿಸಿದರು.

‘ಮನೆಗಳಿಗೆ ಬೇರು ಹೋಗುತ್ತದೆ ಎನ್ನುವ ಆರೋಪವನ್ನಿಟ್ಟುಕೊಂಡು ಮರಗಳನ್ನು ಕಡಿಯವುದನ್ನು ನಿಲ್ಲಿಸಬೇಕು. ಹಾಗೆಯೇ ಗಾಳಿ, ಮಳೆಯಿಂದ ಮರಗಳು ಮುರಿದು ಬೀಳುತ್ತಿವೆ ಎನ್ನುವ ಆತಂಕದಲ್ಲಿ ನೆರಳು ಕೊಡುವ ಹಳೆಯ ಬೃಹದಾಕಾರದ ಮರಗಳನ್ನು ಸರ್ವನಾಶ ಮಾಡಲು ನಿಂತಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಖಂಡನೀಯ’ ಎಂದು ಪರಿಸರ ಪ್ರೇಮಿ ರಾಜೇಂದ್ರ ಸಿಂಗ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-1772366670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.