ಕೆ ಆರ್ ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ 12 ವರ್ಷಗಳ ನಂತರ ಗ್ರಾಮ ದೇವತೆ ಅರೆ ಕಲ್ಲಮ್ಮ ದೇವಿ ಹಬ್ಬವು ಶ್ರದ್ಧೆಯಿಂದ ಶುಕ್ರವಾರ ಮತ್ತು ಶನಿವಾರ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದರು.

ಗ್ರಾಮದ ಬೀದಿಗಳು ವಿದ್ಯುತ್ ಅಲಂಕಾರ ,ತಳಿರು ತೋರಣದಿಂದ ಕಂಗೊಳಿಸುತಿತ್ತು. ತ್ರಿವೇಣಿ ಸಂಗಮದಲ್ಲಿ ದೇವಿಯ ಉತ್ಸವ ಮೂರ್ತಿ ಮತ್ತು ಕನ್ನಕಾಂಡಿಗೆ ಶುದ್ಧೋದಕ ಸ್ನಾನ ಪಂಚಾಮೃತಾಭೀಷೇಕ ನಡೆಸಿ ಹೋಮಗಳನ್ನು ಮಾಡಿ ಕಾಲ್ನಡಿಗೆಯಲ್ಲಿ 10 ಕಿ.ಮೀ ದೂರವಿರುವ ಬಲ್ಲೇನಹಳ್ಳಿಗೆ ಮೆರವಣಿಗೆಯಲ್ಲಿ ಗ್ರಾಮಸ್ಥರು ಗ್ರಾಮದ ಹೆಬ್ಬಾಗಿಲಿಗೆ ಬಂದಾಗ ರಾತ್ರಿ 7 ಗಂಟೆ ಯಾಗಿತ್ತು. ದೇವಿಯ ಕನ್ನಂಕಾಡಿಗೆ ಹೂವಿನಾಲಂಕಾರ ಮಾಡಿ ದೇವಿಗೆ ಬಲಿನೈವೇದ್ಯ ನೀಡಿ ಗ್ರಾಮದೊಳಕ್ಜೆ ಬರಮಾಡಿಕೊಳ್ಳಲಾಯಿತು. ರಾಜಬೀದಿಯಲ್ಲಿ ಮೆರವಣಿಗೆ ನಡೆಯಿತು. ಕನ್ನಂಕಾಡಿಹೊತ್ತ ದೇವರ ಗುಡ್ಡಪ್ಪರ ರಂಗದ ಕುಣಿತ, ಜಾನಪದ ನೃತ್ಯ ಗಮನಸೆಳೆದವು.

ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರೆ, ಮಹಿಳೆಯರು ದೇವರ ಹಾಡು ಹಾಡಿದರು. ಗ್ರಾಮಸ್ಥರು ತಮಟೆಯ ಶಬ್ದಕ್ಕೆ ರಂಗಸೇವೆ ಅರ್ಪಿಸಿದರು. ಗ್ರಾಮದ ಬಸವಣ್ಣನ ಗುಡಿ, ಆರೆಕಲ್ಲಮ್ಮನ ಗುಡಿಯಲ್ಲಿ ದೇವಿಯ ಕನ್ನಂಕಾಡಿಯನ್ನು ಅರ್ಚಕರು ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರ , ಕರಗದೊಂದಿಗೆ ಕನ್ನಂಕಾಡಿ ಹೊತ್ತ ಗುಡ್ಡಪ್ಪಗಳು ರಂಗಸ್ಥಳದಲ್ಲಿ ಪೂಜಾ ನೃತ್ಯ ಮಾಡಿದರು.

ಗ್ರಾಮಸ್ಥರು ದೇವರಿಗೆ ಹಸಿರು ಬಂಡಿಯಲ್ಲಿ ನೇವೇದ್ಯ ಅರ್ಪಿಸಿದರು. ಮೂಲ ದೇವಾಲಯಕ್ಕೆ ಮೆರವಣಿಗೆ ತಲುಪಿದಾಗ ಶನಿವಾರ ಬೆಳಗಿನ ಜಾವ 5 ಗಂಟೆಯಾಗಿತ್ತು. ಅಲ್ಲಿ ದೇವಿಗೆ ಕೊಂಡ, ಪೂಜೆ, ಬಲಿ ನೈವೇದ್ಯ ನಡೆದವು. ಪಟ್ಟ ಕಟ್ಟಿದ್ದ ದೇವಸ್ಥಾನದ ಗುಡ್ಡಪ್ಪ ಶಿವಕುಮಾರ್ , ಗ್ರಾಮದ ಮುಖಂಡ ಪಟೇಲ್ ಸ್ವಾಮಿ ಗೌಡ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಮೆರವಣಿಗೆ ನಡೆದು ವನಭೋಜನ ನಡೆಯಿತು. ಭಾನುವಾರ ಮಾರಮ್ಮನಹಬ್ಬ, ಮಂಗಳವಾರ ರಂಗದಹಬ್ಬ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-1688459203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.