ಮಂಡ್ಯ: ಅನುಭವ ಮಂಟಪ ಸಾಮಾಜಿಕ- ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ‘ಬಸವಪಥ ಸಮಾನತೆ ರಥ’ ವಿಚಾರ ಚಿಂತನ ಕಾರ್ಯಕ್ರಮ ನಗರದ ಶಿವಕುಮಾರಸ್ವಾಮಿ ಉದ್ಯಾನದಲ್ಲಿ ನಡೆಯಿತು.

ವಿವಿಧ ಸಮುದಾಯ ಮತ್ತು ಸಂಘಟನೆಯ ಮುಖಂಡರು ಅನುಭವ ಮಂಟಪದ ಮಾದರಿಯಲ್ಲಿ ಒಗ್ಗೂಡಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಸವಣ್ಣ ಹೊಂದಿದ್ದ ಸಮಭಾವ-ದೂರದೃಷ್ಟಿ ಪ್ರಸ್ತುತತೆ ಕುರಿತು ವಿಚಾರ ಲಹರಿ ತೇಲಿ ಬಂದಿತ್ತು. ಬಸವ ವಚನಗಳು ರಂಜನೆಯ ಜೊತೆಗೆ ಉತ್ತಮ ಹೊಳಹು ನೀಡಿದವು.

ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ ಮಾತನಾಡಿ, ವಿದ್ಯೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದ ಬಸವಣ್ಣ ಸಮಾನತೆಗಾಗಿ, ಸಮಾಜ ಸುಧಾರಣೆಗೆ ಶ್ರಮಿಸಿದವರು. ಮೌಢ್ಯತೆ, ಜಾತಿಯ ಮೇಲು-ಕೀಳು ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಬಸವಣ್ಣರ ಕಾಯಕ ಸಮಾನತೆ ಮತ್ತು ಅನುಭವ ಮಂಟಪದ ಅನುಷ್ಠಾನ ಕ್ರಾಂತಿಕಾರಿ ಎಂದು ಬಣ್ಣಿಸಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಉಳ್ಳವರು, ಬಲಾಢ್ಯರ ಆಶ್ರಯತಾಣವಾಗಿರುವ ಮೇಲ್ಮನನೆ ಬಸವಣ್ಣನವರ ಆಶಯದಂತೆ ಅನುಭವ ಮಂಟಪ ಆಗಬೇಕು. ಎಲ್ಲಾ ಜನವರ್ಗಕ್ಕೆ ಪ್ರಾತಿನಿಧ್ಯ ಸಿಗಬೇಕಾದರೆ ವಿಧಾನ ಪರಿಷತ್, ರಾಜ್ಯಸಭೆಯಲ್ಲಿ ಮೀಸಲಾತಿ ಜಾರಿಯಾಗಬೇಕು ಎಂದರು.

ಕಾಯಕ ಯೋಗಿ ಫೌಂಡೇಷನ್ ಅಧ್ಯಕ್ಷ ಎಂ. ಶಿವಕುಮಾರ್ ಮತ್ತು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯಕುಮಾರ್ ಮಾತನಾಡಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ, ಮುಖಂಡರಾದ ಮಂಡಿಬೆಟ್ಟಹಳ್ಳಿ ಮಂಜುನಾಥ್, ಸೋಮಶೇಖರ್, ನಗರಸಭೆ ಮಾಜಿ ಸದಸ್ಯ ಅಮ್ಜದ್ಪಾಷ, ರೂಪ ಕುಮಾರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.