ಮಂಡ್ಯ: ‘ಸಾಮಾಜಿಕ ಸಮಾನತೆ ಸಾರಿದ ಬಸವಣ್ಣ ಅವರ ಅಶ್ವಾರೂಢ ಸಮೇತ ಪುತ್ಥಳಿಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಬೇಕು’ ಎಂದು ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಸುಂಡಹಳ್ಳಿ ಸೋಮಶೇಖರ್ ಒತ್ತಾಯಿಸಿದರು.

‘ಬಸವ ಜಯಂತಿಯಂದು ಜಿಲ್ಲೆಯ ಎಲ್ಲಾ ಮಠಾಧೀಶರನ್ನು ಆಹ್ವಾನಿಸಬೇಕು. ಜೊತೆಗೆ ವಿವಿಧ ಕಾಯಕ ಮಾಡುವ ಎಲ್ಲಾ ಸಮಾಜದ ಮುಖಂಡರನ್ನು ಗುರುತಿಸಿ ಜಿಲ್ಲಾಡಳಿತ ‘ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಬಸವಣ್ಣ ಅವರ ತತ್ವಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿದ್ದು, ಜಿಲ್ಲಾಡಳಿತ, ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ’ ಎಂದರು.

ವೇದಿಕೆಯ ಎಂ.ಎಸ್.ಮಂಜುನಾಥ್ ಮಾತನಾಡಿ, ‘ಬಸವಣ್ಣನವರ ವಚನಗಳು ಕೇವಲ ಭಾಷಣದಲ್ಲಿ ಇರಬಾರದು, ನರೇಂದ್ರ ಮೋದಿ ಅವರು ಸಂಸತ್ ಎದುರು ಬಸವಣ್ಣನವರ ಪುತ್ಥಳಿ ಸ್ಥಾಪಿಸಬೇಕು. ಎಲ್ಲಾ ಭಾಷೆಗಳಲ್ಲಿಯೂ ವಚನಗಳನ್ನು ಪ್ರಚುರ ಪಡಿಸಲು ಕೇಂದ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವರುದ್ರಪ್ಪ, ಶಿವಲಿಂಗಯ್ಯ, ಕೃಷ್ಣರಾಜೇ ಅರಸ್, ಮಲ್ಲಿಕಾರ್ಜುನಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-40-1157292012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.