ಬೆಳಕವಾಡಿ: ಗ್ರಾಮದ ಹೊಸ ಬಡಾವಣೆಯ ಕಲಿಯುಗ ಲಕ್ಷ್ಮಿದೇವಿ ದೇವಸ್ಥಾನದ 15ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶುಕ್ರವಾರ ಸಿದ್ದಪ್ಪಾಜಿ ಕಂಡಾಯ, ಶಿವನಸಮುದ್ರ ಮಾರಮ್ಮನ ಸತ್ತಿಗೆ ಹಾಗೂ ಬಸವ ಮೆರವಣಿಗೆ ನಡೆಯಿತು.

ಬೆಳಿಗ್ಗೆ ಗ್ರಾಮದ ಹೊರವಲಯದ ಕಾವೇರಿ ನದಿ ತೀರದಲ್ಲಿ ಸಿದ್ದಪ್ಪಾಜಿ ಕಂಡಾಯ, ಶಿವನಸಮುದ್ರ ಮಾರಮ್ಮನ ಸತ್ತಿಗೆ ಹಾಗೂ ಬನ್ನಿ ತಾಳೇಕೊಪ್ಪಲಿನ ಬಸವನನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ, ಮಕ್ಕಳು ಹಾಲರವಿ ಹೊತ್ತು , ಛತ್ರಿ, ದಳವು, ಪಂಜು, ತಮಟೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತಂದು ಇರಿಸಲಾಯಿತು.

ಬನ್ನಿ ತಾಳೇ ಕೊಪ್ಪಲಿನ ಶಿವ ಜ್ಯೋತಿ ಸ್ವಾಮೀಜಿ ದೇವರಿಗೆ ಪೂಜೆ, ಮಹಾ ಮಂಗಳಾರತಿ ನೆರವೇರಿಸಿದರು. ತಮ್ಮಡಿ ಲಕ್ಷ್ಮಮ್ಮ ತೀರ್ಥ, ಪ್ರಸಾದ ವಿನಿಯೋಗ ಮಾಡಿದರು. ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಅನ್ನಸಂತರ್ಪಣೆ ನಡೆಯಿತು. ಪಂಚಾಯಿತಿ ಅಧ್ಯಕ್ಷ ವೆಂಕಟಪ್ಪ, ಯಜಮಾನ ಸಿದ್ದಲಿಂಗಪ್ಪ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-40-1427687957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.